Select Your Language

Notifications

webdunia
webdunia
webdunia
webdunia

ದಾಂಪತ್ಯ ಜೀವನಕ್ಕೆ ಕಾಲಿರಿಸಿದ ನಟಿ ಪ್ರೀತಿ ಜಿಂಟಾ

ದಾಂಪತ್ಯ ಜೀವನಕ್ಕೆ ಕಾಲಿರಿಸಿದ ನಟಿ ಪ್ರೀತಿ ಜಿಂಟಾ
ಲಾಸ್ ಏಂಜಲೀಸ್ , ಮಂಗಳವಾರ, 1 ಮಾರ್ಚ್ 2016 (16:17 IST)
ಬಾಲಿವುಡ್ ಬೆಡಗಿ ಪ್ರೀತಿ ಜಿಂಟಾ ಕೊನೆಗೂ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಬಹಳ ವರ್ಷದಿಂದ ಕಾಯುತ್ತಿದ್ದ ಅಭಿಮಾನಿಗಳಿಗೆ ಪ್ರೀತಿ ಸರ್‌ಪ್ರೈಜ್ ನೀಡಿದ್ದಾರೆ. ಫಿಲ್ಮಂಫೇರ್‌.ಕಾಮ್‌ ಗೆ ನೀಡಿದ ಅಧಿಕೃತ ಮಾಹಿತಿಯಂತೆ ಪ್ರೀತಿ ಮದುವೆಯಾಗಿರುವುದರ ಕುರಿತು ಹೇಳಲಾಗಿದೆ. 42 ಹರೆಯದ ಪ್ರೀತಿ ಜಿಂಟಾ ತಮ್ಮ ಬಹುದಿನದ ಗೆಳೆಯ ಅಮೆರಿಕಾದ ಜೀನ್‌ರೊಂದಿಗೆ ಸಪ್ತಪದಿ ತುಳಿದಿದ್ದಾರೆ.
 

ಲಾಸ್ ಏಜಲೀಸ್‌ನ ಫೆ.29ರಂದು ಆಯೋಜಿಸಲಾಗಿದ್ದ ಖಾಸಗಿ ಸಮಾರಂಭದಲ್ಲಿ ಪ್ರೀತಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ಭಾರತೀಯ ಸಂಪ್ರದಾಯದಂತೆ ಪ್ರೀತಿ ಮದುವೆಯಾಗಿದ್ದಾರೆ. ಇನ್ನೂ ಜೀನ್ ಅಮೆರಿಕಾದಲ್ಲಿ ಉದ್ಯಮಿಯಾಗಿದ್ದು, ಪ್ರೀತಿ ಜಿಂಟಾಕ್ಕಿಂತ ಸುಮಾರು 10 ವರ್ಷ ಚಿಕ್ಕವರಾಗಿದ್ದಾರೆ ಜೀನ್.

ಕಳೆದ ದಿನಗಳ ಹಿಂದೆ ಪ್ರೀತಿ ಜಿಂಟಾ ಹಾಗೂ ಜೀನ್ ಸಂಬಂಧದ ಬಗ್ಗೆ ಗಾಸಿಪ್ ಹರಡಿತ್ತು.. ಇಬ್ಬರ ಮಧ್ಯೆ ಅಫೇರ್ ಇರುವುದು ಗೊತ್ತಾಗಿತ್ತು.

Share this Story:

Follow Webdunia kannada