ದೀಪಾವಳಿಗೆ ಶುಭಕೋರಿದ ದಿಶಾ ಪಟಾನಿ ಮೇಲೆ ಗರಂ ಆದ ಅಭಿಮಾನಿಗಳು

ಗುರುವಾರ, 8 ನವೆಂಬರ್ 2018 (07:03 IST)
ಮುಂಬೈ : ಅಭಿಮಾನಿಗಳಿಗೆ ದೀಪಾವಳಿ ಶುಭಾಶಯ ಕೋರಿದ ಬಾಲಿವುಡ್ ನಟಿ ದಿಶಾ ಪಟಾನಿ ಮೇಲೆ ಅಭಿಮಾನಿಗಳು ಕೋಪಗೊಂಡಿದ್ದಾರೆ.


ಹೌದು. ನಟಿ ದಿಶಾ ಪಟಾನಿ ಅಭಿಮಾನಿಗಳಿಗೆ ದೀಪಾವಳಿ ಶುಭಾಶಯ ಕೋರಿದ್ದಕ್ಕೆ ಸಂತೋಷವಾದರೂ ಕೂಡ ಆವೇಳೆ ಅವರು ಧರಿಸಿದ ಡ್ರೆಸ್ ನೆಟ್ಟಿಗರ ಕೋಪಕ್ಕೆ ಕಾರಣವಾಗಿದೆ. ನ್ಯೂಡ್ ಬಣ್ಣದ ಸುಂದರವಾದ ಲೆಹೆಂಗಾ ಧರಿಸಿರುವ ದಿಶಾ ಅದರ ಜೊತೆ ವಿಚಿತ್ರ ವಿನ್ಯಾಸದ ಬ್ರಾ ಧರಿಸಿ ಕೈಲಿ ಹಣತೆ ಇಟ್ಟುಕೊಂಡಿರುವ ಫೋಟೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿ ದೀಪಾವಳಿ ಶುಭಾಶಯ ಕೋರಿದ್ದರು.


ಇದರಿಂದ ಕೋಪಗೊಂಡ ನೆಟ್ಟಿಗರು ಈ ರೀತಿಯ ಬಟ್ಟೆ ಧರಿಸಿ ಯಾರು ದೀಪಾವಳಿ ಆಚರಣೆ ಮಾಡುತ್ತಾರೆ? ಇದೆಂಥಹ ಅವಿವೇಕ, ದೀಪಾವಳಿ ದಿನವಾದರೂ ನೆಟ್ಟಗೆ ಬಟ್ಟೆ ಹಾಕಿಕೊಳ್ಳೋದಕ್ಕೆ ಆಗೋದಿಲ್ವೇ? ದೀಪಾವಳಿ ಹಬ್ಬದಲ್ಲಾದರೂ ಈ ರೀತಿಯ ಬಟ್ಟೆಗಳನ್ನು ಧರಿಸಬೇಡಿ ಎಂದಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ

ಮುಂದಿನ ಸುದ್ದಿ ರಜನೀಕಾಂತ್ ನಟಿಸಿದ ‘ಕಾಲಾ’ ಚಿತ್ರದಂತೆ ‘2.0’ ಸಿನಿಮಾಕ್ಕೂ ಕರ್ನಾಟಕದಲ್ಲಿ ಸಂಕಷ್ಟ