ಸಿಂಬ ಸಿನಿಮಾದಿಂದ ಗಳಿಸಿದ 51 ಲಕ್ಷ ರೂ. ಮುಂಬೈ ಪೊಲೀಸರಿಗೆ ನೀಡಿದ ನಿರ್ದೇಶಕ ರೋಹಿತ್ ಶೆಟ್ಟಿ

ಬುಧವಾರ, 30 ಜನವರಿ 2019 (11:34 IST)
ಮುಂಬೈ: ರಣವೀರ್ ಸಿಂಗ್ ಪ್ರಧಾನ ಪಾತ್ರ ವಹಿಸಿದ್ದ ‘ಸಿಂಬ’ ಸಿನಿಮಾ 100 ಕೋಟಿ ಗಳಿಕೆ ಮಾಡಿ ಭಾರೀ ಹಿಟ್ ಆಗಿತ್ತು. ಇದೀಗ ಈ ಸಿನಿಮಾದಿಂದ ಬಂದ ಲಾಭಾಂಶದ ಬಹುಪಾಲು ಹಣವನ್ನು ನಿರ್ದೇಶಕ ರೋಹಿತ್ ಶೆಟ್ಟಿ ಮುಂಬೈ ಪೊಲೀಸರಿಗೆ ನೀಡಿದ್ದಾರೆ.


ಉಮಂಗ್ 2019 ಪ್ರಶಸ್ತಿ ಸಮಾರಂಭದಲ್ಲಿ ರೋಹಿತ್ ಶೆಟ್ಟಿ ಈ ಘೋಷಣೆ ಮಾಡಿದ್ದಲ್ಲದೆ, 51 ಲಕ್ಷ ರೂ.ಗಳ ಚೆಕ್ ನ್ನು ಮುಂಬೈ ಪೊಲೀಸ್ ಮುಖ್ಯಸ್ಥರಿಗೆ ನೀಡಿದ್ದಾರೆ.

ಸಿಂಬ ಸಿನಿಮಾ ಕೂಡಾ ಪೊಲೀಸ್ ಅಧಿಕಾರಿಯ ಸುತ್ತ ನಡೆಯುವ ಕತೆಯಾಗಿದೆ. ಹೀಗಾಗಿ ಪೊಲೀಸ್ ಇಲಾಖೆಯ ಅಭಿವೃದ್ಧಿಗಾಗಿ ರೋಹಿತ್ ಶೆಟ್ಟಿ ಮತ್ತು ತಂಡ ದುಬಾರಿ ಮೊತ್ತವನ್ನೇ ದಾನ ಮಾಡಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ

LOADING