Select Your Language

Notifications

webdunia
webdunia
webdunia
webdunia

ದೀಪಿಕಾ ಪಡುಕೋಣೆ- ರಣವೀರ್ ಸಿಂಗ್ ಲವ್ ಬರ್ಡ್ಸ್ ?

ದೀಪಿಕಾ ಪಡುಕೋಣೆ- ರಣವೀರ್ ಸಿಂಗ್  ಲವ್ ಬರ್ಡ್ಸ್ ?
ಮುಂಬೈ , ಬುಧವಾರ, 7 ಮೇ 2014 (09:20 IST)
ಕಳೆದ ಕೆಲವು ದಿನಗಳಿಂದ ದೀಪಿಕ ಒಂದು ಸರ ಧರಿಸಿದ್ದಾಳೆ. ಬಾಲಿವುಡ್ ಮಂದಿಯ ಗಮನ ಆಕೆಯ ಸರದ ಪದಕದ ಮೇಲೆ ನಿಂತಿದೆ ಅನ್ನ ಬಹುದು. ಸರದಲ್ಲಿ ಲಾಕೆಟ್ ಹಾಕಿಕೊಳ್ಳುವುದು ಯಾವ ವಿಶೇಷತೆ ಇದೆ ಎಂದು ನೀವು ಕೇಳಬಹುದು. ವಿಶೇಷತೆ ಇದೆ, ಹೀಗೆ ಧರಿಸಿದ ಲಾಕೆಟ್ ನಲ್ಲಿ ಲವ್ ಅಂತ ಬರೆದಿದೆ.
 
ಇದನ್ನು ಆಕೆಗೆ ರಣವೀರ್ ಸಿಂಗ್ ನೀಡಿದ್ದಾರೆ ಅನ್ನುವ ಸುದ್ದಿಯ ಗುಸುಗುಸು ಈಗ ಬಿ ಟೌನ್ ನಲ್ಲಿ. ಇತ್ತೀಚೆಗೆ ಇವರಿಬ್ಬರು ಕಾಫಿ ಶಾಪ್ಸ್, ಅಲ್ಲಿ ಇಲ್ಲಿ ಎಲ್ಲಾ ಕಡೆ ಕಾಣುತ್ತಿದ್ದಾರಂತೆ. ಅಷ್ಟೇ ಅಲ್ಲದೆ ಅವರಿಬ್ಬರೂ ಹೊರಗಡೆ ದೂರ ವಿಹಾರಕ್ಕೂ ಸಹಿತ ಹೋಗಿದ್ದರಂತೆ. 
 
ಈ ಎಲ್ಲ ಅಂಶಗಳನ್ನು ಗಮನಿಸಿದ ಮಂದಿ ಖಂಡಿತ ಇದು ರಣವೀರ್ ಕಾಣಿಕೆ ಅಂತ ನಿರ್ಧಾರಕ್ಕೆ ಬಂದಿದ್ದಾರೆ. 
 
ರಣಬೀರ್   ಕಪೂರ್ ಜೊತೆ ಪ್ರೀತಿ ಮಾಡುವಾಗ ಆಕೆ ಆರ್ಕೆ ಎನ್ನುವ ಟ್ಯಾಟೂ ಹಾಕಿಸಿಕೊಂಡಿದ್ದಳು. ಆತ ಕೈ ಕೊಟ್ಟ ಬಳಿಕ ಅದನ್ನು ತೆಗೆಯಲು ಸಾಕಷ್ಟು ಕಷ್ಟ ಪಟ್ಟಿದ್ದಳು. ಈಗ ರಣವೀರ್ ಸಿಂಗ್ ಜೊತೆ ಲವ್ವಿ ಡವ್ವಿ ಆರಂಭ ಆಗಿದೆ. ಅದಕ್ಕೆಂದು ಆರೆಸ್ ಎಂದು ಟ್ಯಾಟೂ ಹಾಕಿಸಿಕೊಳ್ತಾಳ ಆಕೆ.. ? ಏನೇ ಆಗಿರಲಿ ಈ ಪ್ರೀತಿ  ದೀಪಿಕ ಬದುಕಲ್ಲಿ ನೆಮ್ಮದಿ ನೀಡಲಿ ! 

Share this Story:

Follow Webdunia kannada