ಕಾಂಗ್ರೆಸ್ ನಾಯಕರಿಗೆ ಈಗ ಬಾಲಿವಡ್ ನಟಿ ಕರೀನಾ ಕಪೂರ್ ಬೇಕೇ ಬೇಕಂತೆ!

ಮಂಗಳವಾರ, 22 ಜನವರಿ 2019 (10:29 IST)
ಮುಂಬೈ: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಯುವ ಮತದಾರರನ್ನು ಸೆಳೆಯಲು ನಾನಾ ರೀತಿಯ ಯೋಜನೆ ಹಾಕುತ್ತಿರುವ ಕಾಂಗ್ರೆಸ್ ಇದೀಗ ಬಾಲಿವುಡ್ ನಟಿ ಕರೀನಾ ಕಪೂರ್ ಸೆಳೆಯಲು ಪ್ರಯತ್ನ ನಡೆಸಿದೆ.


ಕರೀನಾ ಕಪೂರ್ ರನ್ನು ಪಕ್ಷಕ್ಕೆ ಕರೆತಂದು ಚುನಾವಣೆಗೆ ನಿಲ್ಲಿಸಿದರೆ, ಅಥವಾ ಪ್ರಚಾರಕ್ಕೆ ಕರೆತಂದರೆ ಯುವ ಮತದಾರರನ್ನು ಓಟು ಹಾಕಿಯೇ ಹಾಕುತ್ತಾರೆ ಎಂಬುದು ಕಾಂಗ್ರೆಸ್ ನಾಯಕರ ಯೋಜನೆ.

ಕೆಲವು ಕಾಂಗ್ರೆಸ್ ನಾಯಕರು ಇದೀಗ ಕರೀನಾರನ್ನು ಭೋಪಾಲ್ ಕ್ಷೇತ್ರದಿಂದ ಕಣಕ್ಕಿಳಿಸಲು ಪಟ್ಟು ಹಿಡಿದಿದ್ದಾರೆ. ಕರೀನಾ ಬೇಕೇ ಬೇಕು ಎಂದು ಹಠ ಮಾಡುತ್ತಿದ್ದಾರಂತೆ. ಕರೀನಾ ಮಾತ್ರ ಚುನಾವಣೆಗೆ ಸ್ಪರ್ಧಿಸುವುದು ಡೌಟು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ

LOADING