ಕಣ್ಸನ್ನೆ ಸ್ಟಾರ್ ಪ್ರಿಯಾ ಪ್ರಕಾಶ್ ವಾರಿಯರ್ ಬಾಲಿವುಡ್ ಕನಸಿಗೆ ಆರಂಭದಲ್ಲೇ ಶಾಕ್ ಕೊಟ್ಟ ಬೋನಿ ಕಪೂರ್

ಬುಧವಾರ, 16 ಜನವರಿ 2019 (09:36 IST)
ಮುಂಬೈ: ಕಣ್ಸನ್ನೆಯಿಂದಲೇ ರಾತ್ರಿ ಬೆಳಗಾಗುವುದರೊಳಗೆ ದೇಶದಾದ್ಯಂತ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದ ನಟಿ ಪ್ರಿಯಾ ಪ್ರಕಾಶ್ ವಾರಿಯರ್ ಇದೀಗ ಬಾಲಿವುಡ್ ಗೆ ಎಂಟ್ರಿ ಕೊಟ್ಟಿದ್ದಾರೆ. ಆದರೆ ಆರಂಭದಲ್ಲೇ ಅವರಿಗೆ ಶಾಕ್ ಸಿಕ್ಕಿದೆ.


ಪ್ರಶಾಂತ್ ಮಾಂಬುಲೆ ನಿರ್ದೇಶನ ‘ಶ್ರೀದೇವಿ ಬಂಗ್ಲೋ’ ಸಿನಿಮಾ ಮೂಲಕ ಪ್ರಿಯಾ ಪ್ರಕಾಶ್ ಬಾಲಿವುಡ್ ಗೆ ಎಂಟ್ರಿ ಕೊಡುತ್ತಿದ್ದಾರೆ. ಆದರೆ ಈ ಸಿನಿಮಾಗೆ ದಿವಂಗತ ನಟಿ ಶ್ರೀದೇವಿ ಪತಿ ಬೋನಿ ಕಪೂರ್ ರಿಂದ ಆಕ್ಷೇಪ ಎದುರಾಗಿದೆ.

ಕಳೆದ ವರ್ಷ ಶ್ರೀದೇವಿ ದುಬೈಯ ಹೋಟೆಲ್ ಕೊಠಡಿಯೊಂದರ ಬಾತ್ ಟಬ್ ಗೆ ಬಿದ್ದು ಸಾವನ್ನಪ್ಪಿದ್ದರು. ಈ ಘಟನೆ ಮತ್ತು ಶ್ರೀದೇವಿ ಜೀವನದ ಬಗ್ಗೆ ವ್ಯಂಗ್ಯ ಮಾಡುವಂತೆ ಈ ಸಿನಿಮಾ ಇದೆ ಎಂದು ಬೋನಿ ಕಪೂರ್ ಸಿನಿಮಾ ಬಗ್ಗೆ ಆಕ್ಷೇಪ ಎತ್ತಿದ್ದಾರೆ. ಈ ಬಗ್ಗೆ ಸಿನಿಮಾ ತಂಡಕ್ಕೆ ಲೀಗಲ್ ನೋಟಿಸ್ ಕಳುಹಿಸಿದ್ದಾರೆ. ಹೀಗಾಗಿ ಪ್ರಿಯಾ ಪ್ರಕಾಶ್ ಸಿನಿಮಾಗೆ ಆರಂಭದಲ್ಲೇ ವಿಘ್ನ ಎದುರಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ

LOADING