Select Your Language

Notifications

webdunia
webdunia
webdunia
webdunia

ಐಶ್ವರ್ಯ ರೈ ಅಭಿಮಾನಿಗಳಿಗೆ ಕಣ್ಕಟ್ಟು.. ರೂಪ ಬದಲಾವಣೆ ಮಾಡಿಕೊಂಡ ವಿಶ್ವಸುಂದರಿ

ಐಶ್ವರ್ಯ ರೈ ಅಭಿಮಾನಿಗಳಿಗೆ  ಕಣ್ಕಟ್ಟು..  ರೂಪ ಬದಲಾವಣೆ ಮಾಡಿಕೊಂಡ ವಿಶ್ವಸುಂದರಿ
, ಬುಧವಾರ, 27 ಆಗಸ್ಟ್ 2014 (10:54 IST)
ವಿಶ್ವಮಾನ್ಯ ಸುಂದರಿ ಐಶ್ವರ್ಯ ರೈ.ತನ್ನ ರೂಪ , ಅಭಿನಯದಿಂದ ಆಕೆ ಎಲ್ಲರ ಗಮನ ಸೆಳೆದಿದ್ದರು . ಇತ್ತೀಚಿಗೆ ಮುಂಬೈ ನಲ್ಲಿ ನಡೆದ ಕಾರ್ಯಕ್ರಮ ಒಂದರಲ್ಲಿ ಆಕೆ  ತನ್ನ ಕುಟುಂಬದವರ ಭಾಗವಹಿಸಿದರು  ಅಲ್ಲಿಯೂ ಗಮನ ಸೆಳೆದರು. ಆಕೆಯನ್ನು ಕಂಡು ಅಲ್ಲಿದ್ದವರೆಲ್ಲ  ಐಶ್  ಸಿನಿಮಾದಲ್ಲಿ ನಟಿಸುವುದು ಸತ್ಯಾನಾ ಎನ್ನುವ ಚರ್ಚೆ ಮಾಡಿಕೊಂಡರಂತೆ.

ಕೆಲವರು ಧೈರ್ಯ ಮಾಡಿ ಐಶ್ ಬಳಿ ಕೇಳಿಯೇ ಬಿಟ್ಟರಂತೆ. ಅಭಿಷೇಕ್ ಬಚ್ಚನ್ ಅವರ ಜೊತೆ ವಿವಾಹವಾದ ಬಳಿಕವೂ ಸಹಿತ ಐಶ್   ಚಿತ್ರಗಳಲ್ಲಿ ನಟಿಸಿದ್ದರು. ಆದರೆ ಮಗಳು ಆರಾಧ್ಯ ಜನ್ಮಿಸಿದ ಬಳಿಕ ಆಕೆಯು ನಟನೆಯತ್ತ ಆದ್ಯತೆ ನೀಡಲೇ ಇಲ್ಲ. ಮಗಳ ಆರೈಕೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡರು. ಮಗಳು ಹುಟ್ಟಿದ ಬಳಿಕ ಆಕೆ ದಪ್ಪಗಾಗಿದ್ದು ಸತ್ಯ. ಅದಾದ ಬಳಿಕ ಆಕೆ ಚಿತ್ರಗಳಲ್ಲಿ ನಟಿಸುತ್ತಾರೆ ಎನ್ನುವ ಸುದ್ದಿಗೆ ಪೂರಕವಾಗಿ ದಪ್ಪಗಾದ ತನ್ನ ಮೈಯನ್ನು ಸುಂದರವಾಗಿ ತಿದ್ದಿಕೊಳ್ಳಲು  ಆಕೆ ಸಿದ್ಧತೆ ನಡೆಸಿದ್ದಾರೆ ಎನ್ನುವ ಸುದ್ದಿಯು ಸಹಿತ ಸಿಕ್ಕಾಪಟ್ಟೆ  ಸದ್ದು ಮಾಡಿತ್ತು.
webdunia
ಆದರೆ ಕೆಲವು ದಿನಗಳ ಹಿಂದೆಯಷ್ಟೇ ಆಕೆ ಫೋಟೋ ಶೂಟ್ ಮೂಲಕ ತನ್ನ ಸುಂದರವಾದ ಹಾಗೂ ನಾಜೂಕಾದ ದೇಹಸಿರಿ ತೋರಿಸಿ ತನ್ನ ಫ್ಯಾನ್ ಗಳನ್ನು ಖುಷಿ ಪಡಿಸಿದರು . ಆದರೆ ಫೋಟೋಗಳು ನಿಜದಿಂದ ಜಾಸ್ತಿನೇ ದೂರ ಎನ್ನುವ ಸಂಗತಿ  ತನ್ನ ಕುಟುಂಬದವರ ಜೊತೆ ಭಾಗವಹಿಸಿದ ಕಾರ್ಯಕ್ರಮದಲ್ಲಿ ಮೂಲಕ ಸ್ಪಷ್ಟ ಪಡಿಸಿಬಿಟ್ಟರು ಈ ವಿಶ್ವಸುಂದರಿ.
 
 ಆದರೂ ಈ ಪರಿ ದಪ್ಪಕ್ಕಿರುವ ಐಶ್ ಫೋಟೋಗಳಲ್ಲಿ  ಅದು ಹೇಗೆ ಅಷ್ಟು ಸಣ್ಣಕ್ಕೆ ಕಾಣುತ್ತಿದ್ದಾರೆ ಎನ್ನುವ ಸಾವಿರಾರು ಕ್ವಶ್ಚನ್  ಅಲ್ಲಿದ್ದವರ ಮನದಲ್ಲಿ ಮೂಡಿದ್ದು ಸತ್ಯ.   ವಿಷಯ ಏನು ಅಂದ್ರೆ ಅವೆಲ್ಲ ಫೋಟೋ ಶಾಪ್ ಮಾಯಾಜಾಲ. ತನ್ನ ರೂಪವನ್ನು ನಿಜವಾಗಿಯೂ ಅದೇ ರೀತಿ ಯಾವಾಗ ಬದಲಾಯಿಸಿಕೊಂಡು ಐಶ್ ಸಿನಿಮಾದಲ್ಲಿ ನಟಿಸುತ್ತಾರೋ ಎನ್ನುವ  ಕಾತುರ ಜನರಲ್ಲಿ ಮೂಡಿದೆ. ಅವರ ಆಸೆ ಆಶಯ ಸದ್ಯದಲ್ಲೇ ನಿಜ ಆಗುವ ಸಂಭವ  ಸಮೀಪದಲ್ಲಿದೆ ಎನ್ನುವ ಸುದ್ದಿ ಆಪ್ತವಲಯದಿಂದ   ಕೇಳಿ ಬರುತ್ತಿದೆ.

Share this Story:

Follow Webdunia kannada