Select Your Language

Notifications

webdunia
webdunia
webdunia
webdunia

ಸನ್ನಿ ಲಿಯೋನ್‌ಳನ್ನು ಕಾಡುತ್ತಿದ್ದವನಿಗೆ ಸಹನಟನಿಂದ ಕಪಾಳಮೋಕ್ಷ

ಸನ್ನಿ ಲಿಯೋನ್‌ಳನ್ನು ಕಾಡುತ್ತಿದ್ದವನಿಗೆ ಸಹನಟನಿಂದ ಕಪಾಳಮೋಕ್ಷ
ನವದೆಹಲಿ , ಶುಕ್ರವಾರ, 12 ಡಿಸೆಂಬರ್ 2014 (15:45 IST)
ನಟಿ ಗೌಹರ್ ಖಾನ್ ಕಪಾಳಮೋಕ್ಷ ಘಟನೆ ಬಾಲಿವುಡ್ ಅಂಗಳದಲ್ಲಿ ಇನ್ನು ಹಸಿರಾಗಿರುವಾಗ ಬಾಲಿವುಡ್‌ನ ಇನ್ನೊಬ್ಬ ಬೆಡಗಿ ಸನ್ನಿ ಲಿಯೊನ್ ಕೂಡ ಅದೇ ಮಾದರಿಯ ಸನ್ನಿವೇಶವೊಂದನ್ನು ಎದುರಿಸಿದ್ದಾರೆ. 
ತಮ್ಮ ಮುಂಬರುವ ಸಿನಿಮಾ ಲೀಲಾದ ಚಿತ್ರೀಕರಣದಲ್ಲಿ ತೊಡಗಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ರಾಷ್ಟ್ರೀಯ ಸುದ್ದಿ ಪತ್ರಿಕೆಯಲ್ಲಿ ಪ್ರಕಟವಾದ ವರದಿಯ ಪ್ರಕಾರ ಸಿನಿಮಾ ಸೆಟ್‌ನಲ್ಲಿದ್ದ ವ್ಯಕ್ತಿಯೊಬ್ಬ ಸನ್ನಿ ಲಿಯೊನ್ ಜತೆ ವಿಲಕ್ಷಣವಾಗಿ ಮಾತನ್ನಾಡಲಾರಂಭಿಸಿದ. ಇದನ್ನೆಲ್ಲಾ ನೋಡುತ್ತಿದ್ದ ಸನ್ನಿಯ ಸಹನಟ ಮೋಹಿತ್ ಅಹ್ಲಾವತ್ ಅಲ್ಲಿಗೆ ಆಗಮಿಸಿದ ಮತ್ತು ನಟಿಯನ್ನು ಕಾಡಿಸುತ್ತಿದ್ದ ವ್ಯಕ್ತಿಯ ಕೆನ್ನೆಗೆ ಬಾರಿಸಿದ.
 
ತಮ್ಮ ಸಹ ನಟನ ಆವೇಶದ ವರ್ತನೆಯಿಂದ ಸನ್ನಿ ಒಂದು ಕ್ಷಣ ಆವಾಕ್ಕಾದರು. ನಂತರ ಆಕೆ ತನ್ನ ಗಂಡ ಡೇನಿಯಲ್ ವೆಬ್ಬರ್ ಅವರನ್ನು ಸ್ಥಳಕ್ಕೆ ಕರೆಸಿಕೊಂಡರು.
 
ಆದರೆ ಚಿತ್ರ ತಂಡ  ಈ ಘಟನೆಯಲ್ಲಿ ಹುರುಳಿಲ್ಲ . ಮೋಹಿತ್ ಗಂಭೀರ ಸ್ವಭಾವದ ನಟ. ಆತ ಮಾತನಾಡುವುದು ಸಹ ಕಡಿಮೆಯೇ.ಸೆಟ್‌ನಲ್ಲಿ ಕಪಾಳಮೋಕ್ಷ ಘಟನೆಯೇ ನಡೆದಿಲ್ಲ ಎಂದಿದೆ.

Share this Story:

Follow Webdunia kannada