ನಟಿ ಪ್ರಿಯಾಂಕ ಚೋಪ್ರಾ ಹಾಗೂ ನಿಕ್ ಮದುವೆ ಡೇಟ್ ಫಿಕ್ಸ್

ಗುರುವಾರ, 18 ಅಕ್ಟೋಬರ್ 2018 (06:55 IST)
ಮುಂಬೈ : ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ಹಾಗೂ ಅಮೇರಿಕಾದ ಸಿಂಗರ್ ನಿಕ್ ಜೋನಾಸ್ ಅವರ ಮದುವೆ ದಿನಾಂಕ ಫಿಕ್ಸ್ ಆಗಿದೆಯಂತೆ.


ನಟಿ ಪ್ರಿಯಾಂಕ ಚೋಪ್ರಾ ತಮ್ಮ ಪ್ರಿಯತಮ ನಿಕ್ ಜೋನಾಸ್ ಜೊತೆ ನ್ಯೂಯಾರ್ಕ್ ನಲ್ಲಿ ಕದ್ದುಮುಚ್ಚಿ  ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಆದರೆ ಇದನ್ನು ಅಲ್ಲಿನ ಮಾಧ್ಯಮಗಳು ವರದಿ ಮಾಡಿದ್ದವು. ಇದಾದ ನಂತರ ಮುಂಬೈನಲ್ಲಿ ಇವರಿಬ್ಬರು ಸಾಂಪ್ರದಾಯಿಕವಾಗಿ ಉಂಗುರ ಬದಲಿಸಿಕೊಂಡರು.


ಆನಂತರ ಇವರಿಬ್ಬರು ನವೆಂಬರ್ ನಲ್ಲಿ ಮದುವೆಯಾಗಲಿದ್ದಾರೆ ಎಂಬ ಊಹಾಪೋಹಗಳು ಕೂಡ ಕೇಳಿಬಂದಿತ್ತು. ಆದರೆ ಇದೀಗ ಬಂದ ವರದಿಯೊಂದರ ಪ್ರಕಾರ ಡಿಸೆಂಬರ್ 2, 2018 ರಂದು ಜೋದಪುರದಲ್ಲಿ ಪ್ರಿಯಾಂಕ ಚೋಪ್ರಾ ಹಾಗೂ ನಿಕ್ ಮದುವೆ ನಡೆಯಲಿದೆಂತೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ

ಮುಂದಿನ ಸುದ್ದಿ ವಿವಾದಕ್ಕೀಡಾಗಿದೆ ದಿ ವಿಲನ್’ ಚಿತ್ರದ ಮತ್ತೊಂದು ಸಾಂಗ್. ಯಾವ ಕಾರಣಕ್ಕೆ ಗೊತ್ತಾ?