Select Your Language

Notifications

webdunia
webdunia
webdunia
webdunia

ಸಾಲ ತೀರಿಸಲಾಗದೆ ಸಂಕಷ್ಟದಲ್ಲಿರುವ ರೈತರ ನೆರವಿಗೆ ನಿಂತ ನಟ ಅಮಿತಾಬ್ ಬಚ್ಚನ್

ಸಾಲ ತೀರಿಸಲಾಗದೆ ಸಂಕಷ್ಟದಲ್ಲಿರುವ ರೈತರ ನೆರವಿಗೆ ನಿಂತ ನಟ ಅಮಿತಾಬ್ ಬಚ್ಚನ್
ಮುಂಬೈ , ಶನಿವಾರ, 20 ಅಕ್ಟೋಬರ್ 2018 (16:57 IST)
ಮುಂಬೈ : ಉತ್ತರ ಪ್ರದೇಶದಲ್ಲಿ ರೈತರು ಸಾಲ ತೀರಿಸಲು ಆಗದೆ ಸಂಕಷ್ಟಕ್ಕೀಡಾಗಿದ್ದು, ಇದೀಗ ಅವರ ನೆರವಿಗೆ ಬಾಲಿವುಡ್ ಹಿರಿಯ ನಟ ಬಿಗ್ ಬಿ ಅಮಿತಾಬ್ ಬಚ್ಚನ್ ಅವರು  ನಿಂತಿದ್ದಾರೆ.


ಈ ಹಿಂದೆ ಮಹಾರಾಷ್ಟ್ರದಲ್ಲಿ ಸಾಲ ಕಟ್ಟಲು ಕಷ್ಟಪಡುತ್ತಿದ್ದ 350 ರೈತರ ಸಾಲ ತೀರಿಸಿದ್ದ ನಟ ಅಮಿತಾಬ್ ಬಚ್ಚನ್ ಅವರು  ಇದೀಗ 5.5 ಕೋಟಿ ಸಾಲ ಇರುವ ಉತ್ತರ ಪ್ರದೇಶದ 850 ರೈತರಸಾಲ ತೀರಿಸುವ ನಿರ್ಧಾರ ಮಾಡಿದ್ದಾರೆ. ಹಾಗೇ ಅಂಥ ರೈತರ ಪಟ್ಟಿಯೊಂದನ್ನು ತರಿಸಿಕೊಂಡಿರುವುದಾಗಿ ಬಚ್ಚನ್‌ ತಮ್ಮ ಬ್ಲಾಗ್‌ನಲ್ಲಿ ಬರೆದುಕೊಂಡಿದ್ದಾರೆ.


ಅಲ್ಲದೆ, ಬಲವಂತದ ವೇಶ್ಯಾವಾಟಿಕೆ ವಿರುದ್ಧ ಮತ್ತು ಅಪಹರಣಕ್ಕೊಳಗಾಗುವ ಯುವತಿಯರನ್ನು ರಕ್ಷಣೆ ಚಟುವಟಿಕೆಯಲ್ಲಿ ಸಕ್ರಿಯರಾಗಿರುವ ಅಜೀತ್‌ ಸಿಂಗ್‌ ಅವರಿಗೆ ನೆರವು ನೀಡುವುದಾಗಿಯೂ ಬಿಗ್‌ಬಿ ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಅರ್ಜುನ್ ಸರ್ಜಾ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಹೊರಿಸಿದ ಖ್ಯಾತ ನಟಿ ಯಾರು ಗೊತ್ತೇ?!