ಪತಿ ಅಭಿಷೇಕ್, ನಾದಿನಿ ಶ್ವೇತಾಗೆ ಐಶ್ವರ್ಯಾರೈ ಬಚ್ಚನ್ ರನ್ನು ಈ ವಿಚಾರದಲ್ಲಿ ಇಷ್ಟವಾಗಲ್ವಂತೆ!

ಸೋಮವಾರ, 21 ಜನವರಿ 2019 (10:06 IST)
ಮುಂಬೈ: ಕಾಫಿ ವಿತ್ ಕರಣ್ ಶೋನಲ್ಲಿ ಭಾಗವಹಿಸಿದ ಬಾಲಿವುಡ್ ತಾರೆ ಅಭಿಷೇಕ್ ಬಚ್ಚನ್ ಮತ್ತು ಸಹೋದರಿ ಶ್ವೇತಾ ನಂದಾ ಐಶ್ವರ್ಯಾ ರೈ ಬಚ್ಚನ್ ರಲ್ಲಿ ತಾವು ಇಷ್ಟಪಡದ ಗುಣವೇನೆಂದು ಬಹಿರಂಗಪಡಿಸಿದ್ದಾರೆ.


ಇಬ್ಬರಿಗೂ ಕುಟುಂಬದ ಬಗ್ಗೆ ಕರಣ್ ಶೋನಲ್ಲಿ ಸಾಕಷ್ಟು ಪ್ರಶ್ನೆ ಕೇಳಿದ್ದರು. ಕೊನೆಯಲ್ಲಿ ರ್ಯಾಪಿಡ್ ಫಯರ್ ರೌಂಡ್ ನಲ್ಲಿ ಅಭಿಷೇಕ್ ಮತ್ತು ಶ್ವೇತಾ ಬಳಿ ಐಶ್ವರ್ಯಾರಲ್ಲಿ ನೀವು ಇಷ್ಟಪಡುವ ಮತ್ತು ಇಷ್ಟಪಡದ ಗುಣ ಯಾವುದು ಎಂದು ಪ್ರಶ್ನಿಸಿದ್ದಾರೆ.

ಇದಕ್ಕೆ ಮೊದಲು ಉತ್ತರಿಸಿದ ಶ್ವೇತಾ ‘ಒಬ್ಬ ಸ್ವತಂತ್ರ ಮಹಿಳೆಯಾಗಿ, ದಿಟ್ಟ ಮಹಿಳೆಯಾಗಿ, ಉತ್ತಮ ತಾಯಿಯಾಗಿ ಐಶ್ವರ್ಯಾ ಎಂದರೆ ನನಗಿಷ್ಟ. ಆದರೆ ಸಮಯಕ್ಕೆ ಸರಿಯಾಗಿ ಕಾಲ್ ಮಾಡಲ್ಲ, ಸಮಯ ಪರಿಪಾಲನೆ ಮಾಡಲ್ಲ ಎನ್ನುವ ವಿಚಾರ ನನಗೆ ಇಷ್ಟವಿಲ್ಲ ಎಂದಿದ್ದಾರೆ.

ಇದೇ ಪ್ರಶ್ನೆಯನ್ನು ಅಭಿಷೇಕ್ ಗೆ ಕೇಳಿದಾಗ ‘ನನಗೆ ಐಶ್ವರ್ಯಾ ಇಷ್ಟ. ಯಾಕೆಂದರೆ ಅವಳೂ ನನ್ನನ್ನು ಇಷ್ಟಪಡುತ್ತಾಳೆ. ಆದರೆ ಅವಳ ಪ್ಯಾಕಿಂಗ್ ಕಲೆಯನ್ನು ಧ್ವೇಷಿಸುತ್ತೇನೆ. ಆದರೆ ಅದಕ್ಕೆ ನಾನು ಹೊಂದಿಕೊಂಡಿದ್ದೇನೆ’ ಎಂದಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ

LOADING