ಮೆಹಂದಿ ಬಣ್ಣ ಗಾಢವಾಗಿ ಬರಬೇಕೆ..? ಈ ವಿಧಾನ ಮಾಡಿ ನೋಡಿ

ಬುಧವಾರ, 27 ಡಿಸೆಂಬರ್ 2017 (08:06 IST)
ಬೆಂಗಳೂರು: ಕೈಗೆ ಮೆಹಂದಿ ಹಚ್ಚಿಕೊಳ್ಳುವುದು ಅನಾದಿಕಾಲದಿಂದಲೂ ಬಂದಿದೆ. ಹೆಚ್ಚಾಗಿ ಮದುವೆ ದಿನ ಅದರಲ್ಲೂ ವಧು-ವರರ ಕೈಗೆ ಮೆಹಂದಿ ಹಚ್ಚೆ ಹಚ್ಚುತ್ತಾರೆ. ಕೈಗೆ ಎಷ್ಟೇ ಚೆನ್ನಾಗಿರುವ ಡಿಸೈನ್ ಮೆಹಂದಿ ಹಚ್ಚಿದರು ಅದಕ್ಕೆ ಬಣ್ಣ ಬರಲಿಲ್ಲವೆಂದರೆ ಅದು ಚೆನ್ನಾಗಿ ಕಾಣಲ್ಲ. ಹಾಗಾದರೆ ಮೆಹಂದಿ ಡಾರ್ಕ್ ಆಗಿ ತುಂಬಾ ದಿನ ಇರಬೇಕೆಂದರೆ ಹೀಗೆ ಮಾಡಿ.


ಮೆಹಂದಿ ಹಚ್ಚುವ ಮುನ್ನ ಕೈಕಾಲು ಚೆನ್ನಾಗಿ ತೊಳೆಯಿರಿ. ಹಾಗೆ ಮೆಹಂದಿ ಹಚ್ಚಿದ ನಂತರ 7-8 ಗಂಟೆಗಳ ಕಾಲ ಇಟ್ಟರೆ ಅದರ ಬಣ್ಣ ಹೆಚ್ಚಾಗುತ್ತದೆ. ಮೆಹಂದಿ ಕೈಯಲ್ಲಿ ಒಣಗಿದ ನಂತರ ನಿಂಬೆರಸ ಮತ್ತು ಸಕ್ಕರೆ ಮಿಶ್ರಣವನ್ನು ಸ್ವಲ್ಪ ಪ್ರಮಾಣದಲ್ಲಿ ಚುಮುಕಿಸಿ. ತುಂಬಾ ಹಾಕಬೇಡಿ. ನಂತರ  ಸ್ವಲ್ಪ ಹೊತ್ತು ಬಿಟ್ಟು ತೊಳೆಯಿರಿ. ಇದರಿಂದ ಬಣ್ಣ ಗಾಢವಾಗಿ ಬರುತ್ತದೆ.


ಗ್ಯಾಸ್ ಮೇಲೆ ತವಾ ಇಟ್ಟು ಅದರ ಮೇಲೆ ವಿಳ್ಯದೆಲೆ ಹಾಕಿ. ವಿಳ್ಯದೆಲೆ ಮೇಲೆ 4-5 ಲವಂಗ ಹಾಕಿ ಅದರ ಹೊಗೆಗೆ ಕೈಗಳನ್ನು ಹಿಡಿಯುವುದರಿಂದ ಮೆಹಂದಿ ಬಣ್ಣ ಚೆನ್ನಾಗಿ ಬರುತ್ತದೆ. ಮೆಹಂದಿ ತೆಗೆಯುವಾಗ ನೀರು ಅಥವಾ ಸೋಪಿನಿಂದ ತೆಗೆಯಬಾರದು.ಬದಲಾಗಿ ಅದನ್ನು ಕೈಯಿಂದಲ್ಲೇ ತೆಗೆಯಿರಿ. ನಂತರ 2 ಗಂಟೆಗಳ ಕಾಲ ನೀರನ್ನು ಮುಟ್ಟಬಾರದು. ಹೀಗೆ ಮಾಡಿದರೆ ಮೆಹಂದಿ ಬಣ್ಣ ಡಾರ್ಕ್ ಆಗಿ ಬರುತ್ತದೆ. 


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ

LOADING