Select Your Language

Notifications

webdunia
webdunia
webdunia
webdunia

ಎಣ್ಣೆ ಚರ್ಮದ ಸಮಸ್ಯೆಗೆ ಅನುಸರಿಸಿ ಈ ನಾಲ್ಕು ಸರಳ ಟಿಪ್ಸ್

ಎಣ್ಣೆ ಚರ್ಮದ ಸಮಸ್ಯೆಗೆ ಅನುಸರಿಸಿ ಈ ನಾಲ್ಕು ಸರಳ ಟಿಪ್ಸ್
ಬೆಂಗಳೂರು , ಶುಕ್ರವಾರ, 17 ಆಗಸ್ಟ್ 2018 (15:01 IST)
ಎಣ್ಣೆ ಚರ್ಮ ಮತ್ತು ಮೊಡವೆಗಳನ್ನು ನಿರ್ವಹಿಸುವುದು ಸುಲಭದ ವಿಷಯವಲ್ಲ. ಇದಕ್ಕೆ ಹಲವಾರು ಕಾರಣಗಳಿವೆ ಉದಾಹರಣೆಗೆ ವಾತಾವರಣದಲ್ಲಾಗುವ ಬದಲಾವಣೆ, ಒತ್ತಡ, ಡಯೆಟ್, ಹಾರ್ಮೋನ್‌ನಲ್ಲಾಗುವ ಬದಲಾವಣೆ ಮತ್ತು ಚರ್ಮದ ಆರೈಕೆ ಮಾಡದೇ ಇರುವುದು. ಎಣ್ಣೆ ಚರ್ಮಕ್ಕಾಗಿ ಮಾರುಕಟ್ಟೆಯಲ್ಲಿ ಸಿಗುವ ಕೆಮಿಕಲ್ ಹೊಂದಿರುವ ಉತ್ಪನ್ನಗಳನ್ನು ಬಳಸುವ ಬದಲು ಮನೆಯಲ್ಲಿಯೇ ಇರುವ ನೈಸರ್ಗಿಕ ಸಾಮಾಗ್ರಿಗಳನ್ನು ಬಳಸಿ ಈ ಸಮಸ್ಯೆಗೆ ಪರಿಣಾಮಕಾರಿ ಪರಿಹಾರ ಮಾಡಿಕೊಳ್ಳಬಹುದು.
* ಮುಲ್ತಾನಿಮಿಟ್ಟಿ ಫೇಸ್ ಪ್ಯಾಕ್
 
ಸ್ವಲ್ಪ ಬಿಸಿನೀರಿನಲ್ಲಿ ಮುಲ್ತಾನಿಮಿಟ್ಟಿಯನ್ನು ಸೇರಿಸಿ ಅರ್ಧ ಗಂಟೆ ನೆನೆಸಿ ಇದಕ್ಕೆ ರೋಸ್‌ವಾಟರ್‌, ನಿಂಬೆರಸ ಬೆರೆಸಿ ಪೇಸ್ಟ್‌ ತಯಾರಿಸಿ. ಕೊನೆಗೆ ಹಾಲು ಸೇರಿಸಿ ಮುಖಕ್ಕೆ ಲೇಪಿಸಿ. 15 ನಿಮಿಷಗಳ ನಂತರ ಬೆಚ್ಚಗಿನ ನೀರಿನಿಂದ ಮುಖವನ್ನು ತೊಳೆಯಬೇಕು. ಹೀಗೆ ವಾರಕ್ಕೆ 3 ಬಾರಿ ಬಳಸಿದರೆ ತೈಲಯುಕ್ತ ತ್ವಚೆ ನಿವಾರಣೆಯಾಗಿ ಮುಖದ ಶೋಭೆ ವರ್ಧಿಸುತ್ತದೆ.
 
* ಟೊಮ್ಯಾಟೋ ಪ್ಯಾಕ್
 
ಟೊಮ್ಯಾಟೋ ಹಣ್ಣನ್ನು ಭಾಗ ಮಾಡಿ ನೇರವಾಗಿ ಮುಖದ ಮೇಲೆ ಉಜ್ಜಿ ಅಥವಾ ಟೊಮ್ಯಾಟೋ ರಸವನ್ನು ಹಚ್ಚಿ ಕನಿಷ್ಟ 15 ನಿಮಿಷಗಳ ನಂತರ ತಣ್ಣೀರಿನಿಂದ ಮುಖವನ್ನು ತೊಳೆಯಿರಿ. ಹೀಗೆ ಪ್ರತಿ ದಿನ ಮಾಡುವುದರಿಂದ ಮುಖದ ಜಿಡ್ಡನ್ನು ಕಡಿಮೆ ಮಾಡುವುದರ ಜೊತೆಗೆ ಮುಖದ ರಂಧ್ರಗಳು ಕಡಿಮೆಯಾಗುತ್ತದೆ, ಮೊಡವೆ ಹಾಗೂ ಕಪ್ಪುಕಲೆಗಳನ್ನು ಕೂಡ ನಿವಾರಿಸುತ್ತದೆ.
 
* ಬಾಳೆಹಣ್ಣಿನ ಫೇಸ್ ಪ್ಯಾಕ್
 
ಬಾಳೆಹಣ್ಣನ್ನು ಮಸೆದು, ಜೇನುತುಪ್ಪ, ನಿಂಬೆಹಣ್ಣು ಬೆರೆಸಿ ತಯಾರಿಸಿದ ಪೇಸ್ಟ್‌ ಅನ್ನು ಮುಖಕ್ಕೆ ಹಚ್ಚಿ 20 ನಿಮಿಷದ ನಂತರ ಮುಖ ತೊಳೆದ ಬಳಿಕ ಬಿಸಿ ನೀರಿನಲ್ಲಿ ಅದ್ದಿದ ಬಟ್ಟೆಯಿಂದ ಶಾಖ ಕೊಡಿ. ಹೀಗೆ ಮಾಡಿದರೆ ಮುಖದ ಎಣ್ಣೆ ಅಂಶ ದೂರವಾಗುತ್ತದೆ ಹಾಗೂ ರಂಧ್ರಗಳನ್ನು ನಿಯಂತ್ರಿಸುವಲ್ಲಿ ಸಹಾಯ ಮಾಡುತ್ತದೆ ಮತ್ತು ಇದರಿಂದಾಗಿ ಕೊಳಕು ನಿಮ್ಮ ಚರ್ಮಕ್ಕೆ ಪ್ರವೇಶಿಸದಂತೆ ತಡೆಯುತ್ತದೆ ಮೊಡವೆ ಕೂಡ ಕಡಿಮೆ ಮಾಡುತ್ತೆ.

* ಮೊಟ್ಟೆಯ ಪ್ಯಾಕ್
 
1 ಮೊಟ್ಟೆಯ ಬಿಳಿ ಭಾಗವನ್ನು 1/2 ನಿಂಬೆ ಹಣ್ಣಿನ ರಸದೊಂದಿಗೆ ಬೆರೆಸಿ. ಈ ಮಿಶ್ರಣವನ್ನು ಮುಖದ ಮೇಲೆ ಹಚ್ಚಿ. 15 ನಿಮಿಷಗಳ ನಂತರ ಬಿಸಿ ನೀರಿನಿಂದ ತೊಳೆಯಿರಿ. ಹೀಗೆ ವಾರಕ್ಕೆ 3-4 ದಿನ ಮಾಡುವುದರಿಂದ ಚರ್ಮ ಬಿಗಿಯಾಗುತ್ತದೆ, ಅತಿಯಾದ ಜಿಡ್ಡಿನ ಅಂಶವನ್ನು ಹೀರಿಕೊಳ್ಳುತ್ತದೆ ಮತ್ತು ಸನ್ ಬರ್ನ್ ಸಮಸ್ಯೆಯನ್ನು ತಪ್ಪಿಸುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಿಲನಕ್ರಿಯೆ ಬಳಿಕ ಮಹಿಳೆಯರು ಈ ಕೆಲಸ ಮಾಡಲೇಬಾರದು!