Select Your Language

Notifications

webdunia
webdunia
webdunia
webdunia

ಮುಖದ ಅಂದ ಹೆಚ್ಚಿಸುವ ಓಟ್ಸ್ ಪ್ಯಾಕ್

ಮುಖದ ಅಂದ ಹೆಚ್ಚಿಸುವ ಓಟ್ಸ್ ಪ್ಯಾಕ್
ಬೆಂಗಳೂರು , ಶನಿವಾರ, 3 ಮಾರ್ಚ್ 2018 (07:08 IST)
ಬೆಂಗಳೂರು: ಓಟ್ಸ್ ಕೇವಲ ತಿನ್ನುವುದಕ್ಕೆ ಮಾತ್ರವಲ್ಲ. ಅದರಿಂದ ಸೌಂದರ್ಯವನ್ನು ಕಾಪಾಡಿಕೊಳ್ಳಬಹುದು. ಇದರ ಕುರಿತು ಟಿಪ್ಸ್ ಇಲ್ಲಿದೆ ನೋಡಿ.


ವಿಧಾನ:
10ರಿಂದ 15 ನಿಮಿಷ 3 ಚಮಚ ಓಟ್ಸ್ ಅನ್ನು ಬೇಯಿಸಿ. ನಂತರ ಅದನ್ನು ತಣ್ಣಗಾಗಲು ಬಿಡಿ. ನಂತರ ೀ ಮಿಶ್ರಣವನ್ನು ನಿಮ್ಮ ಕೈ ಬೆರಳುಗಳ ಸಹಾಯದಿಂದ ಮುಖಕ್ಕೆ ಹಚ್ಚಿಕೊಳ್ಳಿ. 10ರಿಂದ 15 ನಿಮಿಷಗಳ ಕಾಲ ಹಾಗೇ ಬಿಟ್ಟುಬಿಡಿ. ನಂತರ ತಣ್ಣಗಿನ ನೀರಿನಿಂದ ಮುಖ ತೊಳೆಯಿರಿ. ವಾರದಲ್ಲಿ ಎರಡು ಬಾರಿ ಹೀಗೆ ಮಾಡಿದರೆ ಮುಖದ  ಅಂದ ಹೆಚ್ಚುವುದು.


ಓಟ್ಸ್ ಮತ್ತು ಜೇನಿನ ಪ್ಯಾಕ್
2 ಚಮಚ ಓಟ್ಸ್ ಅನ್ನು ನೀರಿನೊಂದಿಗೆ ಚೆನ್ನಾಗಿ ಬೇಯಿಸಿಕೊಳ್ಳಿ. ತಣ್ಣಗಾದ ನಂತರ ಈ ಮಿಶ್ರಣಕ್ಕೆ 1 ಚಮಚ ಜೇನುತುಪ್ಪ ಹಾಗೂ 2 ಚಮಚ ಮೊಸರು ಸೇರಿಸಿ. ಈ ಮಿಶ್ರಣವನ್ನು ಮುಖ ಹಾಗೂ ಕತ್ತಿಗೆ ಹಚ್ಚಿಕೊಳ್ಳಿ. 15ರಿಂದ 20 ನಿಮಿಷ ಬಿಟ್ಟುಬಿಡಿ. ತಣ್ಣಗಿನ ನೀರಿನಿಂದ ತೊಳೆಯಿರಿ. ಎಣ್ಣೆಯ ಚರ್ಮ ಇರುವವರಿಗೆ ಇದು ಉಪಯುಕ್ತ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಮಹಿಳೆಯರ ಗುಪ್ತಾಂಗದ ಬಗ್ಗೆ ಕೆಲವು ವಿಚಾರಗಳು ತಿಳಿದಿರಲೇಬೇಕು!