Select Your Language

Notifications

webdunia
webdunia
webdunia
webdunia

ಕೇವಲ 2 ಪದಾರ್ಥಗಳನ್ನು ಬಳಸಿ ಹೊಳೆಯುವ ಚರ್ಮವನ್ನು ಪಡೆಯುವುದು ಹೇಗೆ!?

ಕೇವಲ 2 ಪದಾರ್ಥಗಳನ್ನು ಬಳಸಿ ಹೊಳೆಯುವ ಚರ್ಮವನ್ನು ಪಡೆಯುವುದು ಹೇಗೆ!?
ಬೆಂಗಳೂರು , ಶುಕ್ರವಾರ, 8 ಜೂನ್ 2018 (16:28 IST)
ಹಲವರ ಸೌಂದರ್ಯ ಸಮಸ್ಯೆ ಆರಂಭವಾಗುವುದೇ ಚರ್ಮದ ಬಣ್ಣ ಕಪ್ಪಾಗಿರುವುದರಿಂದ. ನಿಮ್ಮ ಚರ್ಮದ ಬಣ್ಣ ಕುಂಠಿತವಾಗಲು ಹಲವು ಕಾರಣಗಳಿವೆ. ನಿಮ್ಮ ಚರ್ಮವನ್ನು ಉತ್ತಮವಾಗಿ ಆರೈಕೆ ಮಾಡದಿದ್ದರೆ ಚರ್ಮದ ನೈಸರ್ಗಿಕವಾದ ಹೊಳಪು ಮತ್ತು ಮೃದುತ್ವ ಕಡಿಮೆಯಾಗುತ್ತದೆ.

ಸೂರ್ಯನ ಕಿರಣಗಳಿಗೆ ಅತಿಯಾಗಿ ತೆರೆದುಕೊಂಡರೆ ನಿಮ್ಮ ಚರ್ಮದ ಬಣ್ಣ ಕಪ್ಪಾಗುತ್ತದೆ ಮತ್ತು ಚರ್ಮವನ್ನು ಒಣಗಿಸುತ್ತದೆ. ಅದಲ್ಲದೆ, ಚರ್ಮದ ಹೊಳಪಿಗಾಗಿ ನೀವು ಬಳಸುವ ಔಷಧಗಳಲ್ಲಿನ ರಾಸಾಯನಿಕ ಪದಾರ್ಥಗಳೂ ಸಹ ನಿಮ್ಮ ಚರ್ಮದ ಆರೋಗ್ಯಕ್ಕೆ ಹಾನಿಯನ್ನುಂಟುಮಾಡಬಹುದು. ನೀವು ಈ ಸಮಸ್ಯೆಯಿಂದ ಬಳಲುತ್ತಿದ್ದೆ ಯೋಚಿಸಬೇಕಾದ ಅಗತ್ಯವಿಲ್ಲ. ಕೇವಲ ಎರಡೇ ಪದಾರ್ಥಗಳನ್ನು ಬಳಸಿ ಹೊಳೆಯುವ ಸುಂದರವಾದ ಚರ್ಮವನ್ನು ನಿಮ್ಮದಾಗಿಸಿಕೊಳ್ಳಬಹುದು.
 
ನಿಮ್ಮ ಚರ್ಮದ ಸೌಂದರ್ಯವನ್ನು ಕಾಪಾಡಲು ನಿಮಗೆ ಬೇಕಾಗುವ ಸಾಮಗ್ರಿಗಳು,
* ಕಲ್ಲುಪ್ಪು
* ಹಸಿ ಹಾಲು
ಹೌದು, ಕೇವಲ ಈ ಎರಡು ವಸ್ತುಗಳಿಂದ ನೀವು ಹೊಳೆಯುವ ಸುಂದರ ಚರ್ಮವನ್ನು ನಿಮ್ಮದಾಗಿಸಿಕೊಳ್ಳಬಹುದು.
 
ಮೊದಲು ನಿಮ್ಮ ಮುಖವನ್ನು ಹಸಿ ಹಾಲನ್ನು ಬಳಸಿ ಚೆನ್ನಾಗಿ ಮಸಾಜ್ ಮಾಡಿ. ನಂತರ ಸ್ವಲ್ಪ ಕಲ್ಲುಪ್ಪನ್ನು ತೆಗೆದುಕೊಂಡು ಮೇಲ್ಮುಖವಾಗಿ 1 ನಿಮಿಷ ಮಸಾಜ್ ಮಾಡಿ. ಅದನ್ನು 5 ರಿಂದ 10 ನಿಮಿಷ ಹಾಗೆಯೇ ಬಿಡಿ. ನಂತರ ಬೆಚ್ಚಗಿನ ನೀರಿನಿಂದ ಮುಖವನ್ನು ತೊಳೆದರೆ ಹೊಳೆಯುವ ಚರ್ಮ ನಿಮ್ಮದಾಗುತ್ತದೆ. ನೀವು ಈ ವಿಧಾನವನ್ನು ಕಾಲು ಮತ್ತು ಕೈಗಳಿಗೂ ಸಹ ಬಳಸಬಹುದಾಗಿದೆ.
 
ಈ ವಿಧಾನದಿಂದ ನೀವು ಕೇವಲ 10 ನಿಮಿಷಗಳಲ್ಲಿ ಪರಿಣಾಮವನ್ನು ಕಾಣಬಹುದಾಗಿದ್ದು ತುಂಬಾ ಕಡಿಮೆ ವೆಚ್ಚವೂ ಆಗಿದೆ. ಆದ್ದರಿಂದ ನಿಮ್ಮ ಚರ್ಮದ ಬಣ್ಣ ಕಪ್ಪಾಗಿದ್ದರೆ ಈ ವಿಧಾನವನ್ನು ಅನುಸರಿಸಿ ತಕ್ಷಣವೇ ಪರಿಣಾಮವನ್ನು ಕಂಡುಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಮೊಟ್ಟೆಯನ್ನು ಸಾಲ್ಮೊನೆಲ್ಲಾದಿಂದ ರಕ್ಷಿಸಲು 3 ಸುಲಭ ವಿಧಾನಗಳು