Select Your Language

Notifications

webdunia
webdunia
webdunia
webdunia

ಅಶ್ವತ್ಥ ಮರಕ್ಕೆ ಪ್ರದಕ್ಷಿಣೆ ಹಾಕುವುದು ಯಾಕೆ ಗೊತ್ತಾ?

ಅಶ್ವತ್ಥ ಮರಕ್ಕೆ ಪ್ರದಕ್ಷಿಣೆ ಹಾಕುವುದು ಯಾಕೆ ಗೊತ್ತಾ?
ಬೆಂಗಳೂರು , ಶುಕ್ರವಾರ, 8 ಫೆಬ್ರವರಿ 2019 (08:52 IST)
ಬೆಂಗಳೂರು: ಮಕ್ಕಳಾಗದ ದಂಪತಿ, ಅವಿವಾಹಿತ ಕನ್ಯೆಯರು ಅಶ್ವತ್ಥ ಮರಕ್ಕೆ ಪ್ರದಕ್ಷಿಣೆ ಹಾಕುವುದನ್ನು ನೋಡುತ್ತೇವೆ. ನಿಜವಾಗಿ ಇದರ ಮಹತ್ವವೇನು ಗೊತ್ತಾ?


ಅಶ್ವತ್ಥ ಮರ ನಮಗೆ ಹಣ್ಣಾಗಲಿ, ಸುಗಂಧವಾಗಲೀ ಕೊಡುವುದಿಲ್ಲ. ಹಾಗಿದ್ದರೂ ವೃಕ್ಷಗಳ ಸಮುದಾಯದಲ್ಲೇ ಶ್ರೇಷ್ಠವಾದ ಮರ ಅಶ್ವತ್ಥ ಮರ. ಯಜ್ಞ ಯಾಗಾದಿಗಳಲ್ಲೂ ಅಶ್ವತ್ಥದ ಕಾಷ್ಟ ಪ್ರಮುಖವಾಗಿ ಬಳಸಲಾಗುತ್ತದೆ.

ಹಲವರು ಅಶ್ವತ್ಥ ಮರದಲ್ಲಿ ದೇವತಾ ಸಾನಿಧ್ಯವಿದೆ ಎಂದು ಅದಕ್ಕೆ ಪ್ರದಕ್ಷಿಣೆ ಬರುತ್ತಾರೆ. ಮಕ್ಕಳಾಗದಿದ್ದಾಗ ಜ್ಯೋತಿಷಿಗಳು ಅಶ್ವತ್ಥ ಮರಕ್ಕೆ ಪ್ರದಕ್ಷಿಣೆ ಬರುವಂತೆ ಸೂಚಿಸುತ್ತಾರೆ. ಇದು ಏಕೆ ಎಂಬ ಕಲ್ಪನೆ ಇಲ್ಲದವರು ಇದನ್ನು ಮೂಡನಂಬಿಕೆ ಎನ್ನುತ್ತಾರೆ.

ಆದರೆ ಹಿಂದಿನ ಕಾಲದಲ್ಲಿ ಋಷಿ,ಮುನಿಗಳು ಅಶ್ವತ್ಥ ಮರದ ಬುಡದಲ್ಲಿ ಕುಳಿತು ವೇದಾಧ್ಯಯನ ಮಾಡುತ್ತಿದ್ದರು. ಹೀಗೆ ಅಶ್ವತ್ಥ ಮರದಲ್ಲಿ ಭಗವಂತನ ವಿಶೇಷ ವಿಭೂತಿ ಆ ಮರಕ್ಕೆ ಇಂತಹ  ಅನೇಕ ವಿಶಿಷ್ಟ ಶಕ್ತಿಯನ್ನು ಕೊಟ್ಟಿದೆ. ವೇದವನ್ನು ಉಪದೇಶ ಮಾಡಿದ ಭಗವಂತನ ವಿಶೇಷ ಅವತಾರ ಅಶ್ವರೂಪಿ ಹಯಗ್ರೀವ. ಅಶ್ವದ ಹಾಗೆ ಇದ್ದು ವೇದೋಪದೇಶ ಮಾಡಿದ ಭಗವಂತನನ್ನು ಅಶ್ವತ್ಥಃ ಎಂದು ಕರೆಯುತ್ತಾರೆ. ಇದೇ ಕಾರಣಕ್ಕೆ ಅಶ್ವತ್ಥ ಮರ ವಿಶೇಷವಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ಕುಂಭ ರಾಶಿಯವರು ಯಾವ ರಾಶಿಯವರನ್ನು ಮದುವೆಯಾಗುವುದು ಸೂಕ್ತ?