Select Your Language

Notifications

webdunia
webdunia
webdunia
webdunia

ನಾಗ ದೋಷ ಭಾದಿಸುತ್ತಿದೆಯೇ ಇಲ್ಲಿಗೆ ಭೇಟಿಕೊಡಿ...!

ನಾಗ ದೋಷ ಭಾದಿಸುತ್ತಿದೆಯೇ ಇಲ್ಲಿಗೆ ಭೇಟಿಕೊಡಿ...!

ಗುರುಮೂರ್ತಿ

ಬೆಂಗಳೂರು , ಸೋಮವಾರ, 29 ಜನವರಿ 2018 (17:09 IST)
ಮನುಷ್ಯ ಹುಟ್ಟಿದಾಗಿನಿಂದ ಅವನ ಕರ್ಮಗಳನ್ನು ನಾವು ಜಾತಕದ ಮೂಲಕ ತಿಳಿದುಕೊಳ್ಳಬಹುದು. ಕೆಲವೊಮ್ಮೆ ಈ ಜಾತಕಗಳು ನಮಗೆ ಮುಂದೆ ಒದಗಬಹುದಾದ ತೊಂದರೆಗಳನ್ನು ಮೊದಲೇ ಸೂಚಿಸಲು ಸಹಾಯಕಾರಿ. ಕೆಲವರು ಇದನ್ನು ನಂಬುತ್ತಾರೆ ಆದರೆ ಇನ್ನು ಕೆಲವರು ಈ ಜಾತಕಗಳನ್ನು ನಂಬುವುದಿಲ್ಲ .

ಆದರೂ ಸಾಮಾನ್ಯವಾಗಿ ಹಿಂದುಗಳಲ್ಲಿ ಹೆಚ್ಚಾಗಿ ಈ ಜಾತಕ ಪರಿಶೀಲಿಸುವ ಪರಿಪಾಠವನ್ನು ಹೊಂದಿರುತ್ತಾರೆ. ಅದರ ಮೂಲಕ ಮುಂದೆ ಒದಗಬಹುದಾದ ತೊಂದರೆ ವಿಪತ್ತುಗಳಿಗೆ ಶಾಂತಿ ಪರಿಹಾರವನ್ನು ಮಾಡುವ ಮೂಲಕ ತೊಂದರೆಯ ತೀವ್ರತೆಯನ್ನು ಶಾಂತಗೊಳಿಸಬಹುದು ಎಂಬುದು ಪುರಾತನದಿಂದ ಬಂದ ಒಂದು ನಂಬಿಕೆಯಾಗಿದೆ.
 
ಕೆಲವೊಮ್ಮೆ ನಮ್ಮ ಜಾತಕದಲ್ಲಿ ಕಾಣಸಿಗುವ ದೋಷಗಳು ನಮ್ಮನ್ನು ವಾಸ್ತವ ಜೀವನದಲ್ಲಿ ಹೆಚ್ಚಾಗಿ ಬಾಧಿಸುವುದನ್ನು ನಮ್ಮ ಸುತ್ತಮುತ್ತನಲ್ಲಿ ನೋಡಿರುತ್ತೇವೆ. ಅದರಲ್ಲೂ ಹೆಚ್ಚಾಗಿ ಕಾಳ ಸರ್ಪದೋಷಗಳು ನಾಗದೋಷಗಳ ಕುರಿತು ನಾವು ಆಗಾಗ ಕೇಳುತ್ತಿರುತ್ತೇವೆ. ಈ ದೋಷಗಳಲ್ಲಿ ಕೆಲವು ಪೂರ್ವಜನ್ಮದ ದೋಷಗಳಾದರೆ ತಿಳಿದು ತಿಳಿಯದೇ ಮಾಡಿದ ಕೆಲವು ತಪ್ಪುಗಳಿಂದ ನಾವು ದೋಷಕ್ಕೆ ಬಲಿಯಾಗುತ್ತೇವೆ. ಅವುಗಳಿಂದ ನಾನಾ ತರಹದ ತೊಂದರೆಗಳನ್ನು ಅನುಭವಿಸುವುದನ್ನು ಕಾಣಬಹುದು. ಅಷ್ಟೇ ಅಲ್ಲ ವಿವಾಹವಾಗದೇ ಇರುವುದು, ಚರ್ಮ ರೋಗ, ನಿರುದ್ಯೋಗ, ಸಂತಾನ ಇಲ್ಲದೇ ಇರುವುದು ಇನ್ನು ಅನೇಕ ತೊಂದರೆಗಳು ಆಗುವುದು ಈ ನಾಗದೋಷಗಳಿಂದ ಅಂತಾ ಹೇಳುತ್ತಾರೆ.
 
ಹೀಗಾಗಿ ಅನೇಕ ಮಂದಿ ಇದಕ್ಕೆ ಪರಿಹಾರವಾಗಿ ಜ್ಯೋತಿಷ್ಯಿಗಳು, ದೇವಾಲಯಗಳ ಮೊರೆ ಹೋಗುವುದು ಸಾಮಾನ್ಯವಾದ ಸಂಗತಿಯೇ ಎಂದೇ ಹೇಳಬಹುದು ಇದಲ್ಲದೇ ರಾಹು, ಕೇತು ಹಾಗು ಶನಿ ದೋಷಗಳು ಮನುಷ್ಯನನ್ನು ಭಾದಿಸುತ್ತವೆ. ಇದರಿಂದ ಶುಭಕಾರ್ಯಗಳಿಗೆ ಅಡೆ-ತಡೆ ಅಪಘಾತ ಮುಂತಾದವುಗಳಾದ ನಿದರ್ಶನಗಳು ನಮ್ಮ ಕಣ್ಣ ಮುಂದಿದೆ.
 
ಹಾಗಾದರೆ ನಮ್ಮ ಜಾತಕದಲ್ಲಿರುವ ದೋಷಗಳನೆಲ್ಲಾ ಪರಿಹಾರ ಮಾಡಿಕೊಳ್ಳುವುದು ಹೇಗೆ? ಎಂಬ ಪ್ರಶ್ನೆ ಜನಸಾಮಾನ್ಯರಲ್ಲಿ ಮೂಡುವುದು ಸಾಮಾನ್ಯ. ಅದಕ್ಕಾಗಿಯೇ ಕೆಲವು ಪುಣ್ಯಕ್ಷೇತ್ರಗಳಿವೆ. ಅಲ್ಲಿಗೆ ಹೋಗಿ ದೇವರ ಸೇವೆ ಮಾಡಿ ದರ್ಶನ ಪಡೆಯುವುದರಿಂದ ನಿಮ್ಮ ಎಲ್ಲಾ ಕಷ್ಟಗಳು ಪರಿಹಾರವಾಗುತ್ತವೆ ಅಂತಹ ದೇವಾಲಯಗಳು ಯಾವುವು ಯಾವ ದೋಷಕ್ಕೆ ಇವು ಪರಿಹಾರವನ್ನು ನೀಡುತ್ತದೆ ಎನ್ನುವುದರ ಕುರಿತು ಸಂಕ್ಷಿಪ್ತವಾಗಿ ತಿಳಿಯೋಣ.
 
ನಮ್ಮ ದೇಶವು ಹಲವಾರು ಸಂಸ್ಕೃತಿ ಸಂಪ್ರದಾಯಗಳ ತಳಹದಿಯಲ್ಲಿ ಇರುವ ರಾಷ್ಟ್ರ ಇಲ್ಲಿ ಹಲವಾರು ದೇವಸ್ಥಾನಗಳು ಮತ್ತು ಅವುಗಳ ಶಕ್ತಿಯ ಕುರಿತು ನಾವು ಕೇಳುತ್ತಲೇ ಇರುತ್ತೇವೆ ಅದರಿಂದಲೇ ಅಂತಹ ಕ್ಷೇತ್ರಗಳು ರಾಷ್ಟ್ರಮಟ್ಟದಲ್ಲಿ ಅಷ್ಟೇ ಅಲ್ಲ ವಿದೇಶಗಳಲ್ಲೂ ಸಹ ತನ್ನ ಶಕ್ತಿಯಿಂದ ವಿಶ್ವ ಮಟ್ಟದಲ್ಲಿ ಹೆಸರನ್ನು ವಿಸ್ತಾರಗೊಳಿಸಿವೆ. ಅವುಗಳಲ್ಲಿ ಮುಖ್ಯವಾದುದನ್ನು ಈ ಕೆಳಗೆ ನೀಡಲಾಗಿದೆ.
 
 
ಶ್ರೀಕಾಳಹಸ್ತಿ 
webdunia
ಆಂಧ್ರ ಪ್ರದೇಶ ರಾಜ್ಯದ ಚಿತ್ತೂರು ಜಿಲ್ಲೆಯ ಶ್ರೀಕಾಳಹಸ್ತಿ ಪಟ್ಟಣದಲ್ಲಿರುವ ಶ್ರೀಕಾಳಸ್ತೀಶ್ವರ ದೇವಾಲಯವು ಸುವರ್ಣಮುಖಿ ನದೀ ತೀರದಲ್ಲಿರುವ ಪ್ರಮುಖ ಶೈವ ಯಾತ್ರಾ ಸ್ಥಳವಾಗಿದೆ. ಇಲ್ಲಿ ಜಾತಕದಲ್ಲಿರುವ ರಾಹು-ಕೇತುವಿನ ದೋಷಗಳಿಗೆ ಸಂಬಂಧಿಸಿದಂತೆ ಅದರ ಪರಿಹಾರಕ್ಕಾಗಿ ಇಲ್ಲಿ ವಿಶೇಷವಾಗಿ ಪೂಜೆಯನ್ನು ಮಾಡಲಾಗುತ್ತದೆ. ಇದು ಮುಖ್ಯವಾಗಿ ಕಾಳಸರ್ಪದೋಷವನ್ನು ನಿವಾರಿಸುವ ಕ್ಷೇತ್ರವೆಂದೇ ಖ್ಯಾತಿಯನ್ನು ಹೊಂದಿದ್ದು, ರಾಹು, ಕೇತು ದೋಷವಿರುವವರು ವರ್ಷದಲ್ಲಿ 2 ಬಾರಿ ಅಂದರೆ ಉತ್ತರಾಯಣದಲ್ಲಿ (ಜನವರಿ 15 ರಿಂದ ಜುಲೈ 15 ರವರೆಗೆ) ಹಾಗು ದಕ್ಷಿಣಾಯಣ (ಜುಲೈ 15 ರಿಂದ ಜನವರಿ 15 ರವರೆಗೆ) ಸಂದರ್ಭದಲ್ಲಿ ಈ ದೋಷ ನಿವಾರಣೆಯ ಪೂಜೆ ಮಾಡಿಕೊಳ್ಳಬಹುದಾಗಿದೆ. ಜಾತಕದಲ್ಲಿ ಮದುವೆಯ ತೊಂದರೆ ಇದ್ದವರು ಇಲ್ಲಿ ಪೂಜೆ ಸಲ್ಲಿಸಬಹುದಾಗಿದೆ.
 
ಮನ್ನಾರ್‌ಸಾಲಾ ನಾಗರಾಜ ದೇವಸ್ಥಾನ
webdunia

 
ದೇವರ ನಾಡು ಎಂದೇ ಪ್ರಖ್ಯಾತಿ ಹೊಂದಿರುವ ರಾಜ್ಯ ಕೇರಳ. ಕೇರಳದಲ್ಲಿ ಸಾಕಷ್ಟು ದೇವಸ್ಥಾನಗಳಿದ್ದು ಸರ್ಪದೋಷ ನಿವಾರಣೆಗೆ ಮನ್ನಾರ್‌ಸಾಲಾದಲ್ಲಿರುವ ನಾಗರಾಜನ ದೇವಾಲಯವು ಪ್ರಸಿದ್ಧಿಯನ್ನು ಪಡೆದಿದೆ. ಕೇರಳದ ಅಲಪುಳಾದಿಂದ ಸುಮಾರು 30 ಕಿ.ಮೀಗಳಷ್ಟು ದೂರದಲ್ಲಿ ಈ ದೇವಾಸ್ಥಾನವಿದ್ದು ಈ ಕ್ಷೇತ್ರಕ್ಕೆ ಪರಶುರಾಮನ ಸ್ಥಳ ಪುರಾಣವು ಕೂಡ ಇದೆ. ಈ ಕ್ಷೇತ್ರದಲ್ಲಿ ಎಲ್ಲಾ ಪೂಜೆ ಪುನಸ್ಕಾರಗಳನ್ನು ಸ್ತ್ರೀಯರೇ ಮಾಡುವುದು ಇಲ್ಲಿನ ಮತ್ತೊಂದು ವಿಶೇಷ ಎಂದೇ ಹೇಳಬಹುದು. ಈ ಒಂದು ಕ್ಷೇತ್ರದಲ್ಲಿ 30.000 ಕ್ಕೂ ಅಧಿಕ ಸರ್ಪಗಳ ಚಿತ್ರಗಳನ್ನು, ಪ್ರತಿಮೆಗಳನ್ನು ಕಾಣಬಹುದು.
 
ಕುಕ್ಕೆ ಸುಬ್ರಮಣ್ಯ 
webdunia
ಕುಕ್ಕೆ ಸುಬ್ರಮಣ್ಯ ಕ್ಷೇತ್ರವನ್ನು ನಾಗ ದೋಷ ಪರಿಹಾರ ಮಾಡುವ ಶಕ್ತಿ ಕೇಂದ್ರ ಅಂತಲೂ ಕರೆಯುತ್ತಾರೆ. ಪರಶುರಾಮ ಸೃಷ್ಠಿಯ ಸಪ್ತ ಕ್ಷೇತ್ರಗಳಲ್ಲೊಂದಾದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರವು ಪುರಾಣ ಇತಿಹಾಸ ಕಾಲಗಳಿಂದಲೂ ನಾಗಾರಾಧನೆಗೆ ಪ್ರಸಿದ್ಧಿಯಾಗಿದ್ದು, ವಾಸುಕಿ ಆದಿಶೇಷ ಸಹಿತ ಶ್ರೀ ಸುಬ್ರಹ್ಮಣ್ಯ ದೇವರು ಭಕ್ತಾ ಭೀಷ್ಟ ಪ್ರದಾಯಕನಾಗಿ ಈ ಕ್ಷೇತ್ರದ ಅಧಿದೇವತೆಯಾಗಿ ನೆಲೆಸಿದ್ದಾನೆ ಎಂಬುದು ಲಕ್ಷಾಂತರ ಭಕ್ತರ ನಂಬಿಕೆ. ಇಲ್ಲಿ ಜಾತಕದಲ್ಲಿ ಕಂಡುಬರುವ ಕುಜದೋಷ, ನಾಗದೋಷಗಳಿದೆ ಮುಕ್ತಿ ನೀಡಲಾಗುವುದಲ್ಲದೇ ಸರ್ಪ ಸಂಸ್ಕಾರ, ನಾಗಪ್ರತಿಷ್ಠೆ, ಆಶ್ಲೇಷಬಲಿ ಮೂಲಕ ಜನ್ಮ ಜನ್ಮಾಂತರದ ನಾಗ ದೋಷಗಳಿಂದ ಮುಕ್ತಿ ಹೊಂದಬಹುದಾಗಿದೆ.
 
ತ್ರಯಂಬಕೇಶ್ವರ ದೇವಸ್ಥಾನ
webdunia
ತ್ರಿಂಬಕೇಶ್ವರ ಅಥವಾ ತ್ರಯಂಬಕೇಶ್ವರ ದೇವಸ್ಥಾನವು 12 ಜ್ಯೋತಿರ್ಲಿಂಗಗಳಲ್ಲಿ ಒಂದಾಗಿದ್ದು ಶೈವಯಾತ್ರಾಸ್ಥಳವಾಗಿದೆ. ಇದು ಮಹಾರಾಷ್ಟ್ರದ ನಾಸಿಕ್‌ ಜಿಲ್ಲೆಯಲ್ಲಿದ್ದು ತ್ರಿಂಬಕ್ ಎನ್ನುವ ಪಟ್ಟಣದಲ್ಲಿದೆ. ತ್ರಿಮೂರ್ತಿಗಳಾದಂತಹ ಬ್ರಹ್ಮ, ವಿಷ್ಣು ಹಾಗು ಮಹೇಶ್ವರರ ಮುಖವನ್ನು ಒಂದೇ ಲಿಂಗದಲ್ಲಿ ಇರುವುದನ್ನು ನಾವು ಕಾಣಬಹುದಾಗಿದೆ. ಈ ತ್ರಿಂಬಕೇಶ್ವರ ದೇವಾಲಯದಲ್ಲಿ ನಾಗಬಲಿ ಅಥವಾ ಕಾಳಸರ್ಪ ದೋಷಗಳನ್ನು ನಿವಾರಣೆ ಮಾಡುವ ಅನೇಕ ಪೂಜಾ ಕೈಂಕರ್ಯವನ್ನು ಇಲ್ಲಿ ಮಾಡಲಾಗುತ್ತದೆ.
 
ಮಹಾಕಾಳೇಶ್ವರ 
webdunia
ಮಹಾಕಾಳೇಶ್ವರ ದೇವಸ್ಥಾನವು ಮಧ್ಯ ಪ್ರದೇಶ ರಾಜ್ಯದ ಉಜ್ಜಯನಿಯಲ್ಲಿರುವ ಪೂಣ್ಯ ಕ್ಷೇತ್ರವಾಗಿದೆ. ಈ ದೇವಸ್ಥಾನವು ಸಹ ಶೈವ ಕ್ಷೇತ್ರವಾಗಿದ್ದು ಪವಿತ್ರವಾದ 12 ಜ್ಯೋತಿರ್ಲಿಂಗ ಪೈಕಿ ಇದು ಕೂಡಾ ಒಂದಾಗಿದೆ. ಈ ಕ್ಷೇತ್ರದಲ್ಲೂ ಸಹ ಕಾಳಸರ್ಪ ದೋಷವನ್ನು ನಿವಾರಿಸುವ ಪೂಜಾ ಕ್ರಿಯೆಯನ್ನು ಮಾಡಲಾಗುತ್ತದೆ.
 
 
ಮೋಪಿದೇವಿ ದೇವಾಲಯ
ಮೋಪಿದೇವಿ ದೇವಾಲಯವು ಆಂಧ್ರ ಪ್ರದೇಶದ ಕೃಷ್ಣ ಜಿಲ್ಲೆಯ ಮಚಲಿಪಟ್ಟಣದಿಂದ ಸುಮಾರು 30 ಕಿ.ಮೀ ದೂರದಲ್ಲಿದೆ. ಇಲ್ಲಿರುವ ಮೋಪಿದೇವಿ ದೇವಾಲಯ ನಾಗದೋಷ ಪರಿಹಾರಕ್ಕೆ ಪ್ರಸಿದ್ಧಿಯನ್ನು ಪಡೆದಿದ್ದು ಇದನ್ನು ಸರ್ಪಕ್ಷೇತ್ರವೆಂದೂ ಕೂಡ ಕರೆಯುತ್ತಾರೆ. ಈ ದೇವಸ್ಥಾನದಲ್ಲಿ ಸುಬ್ರಹ್ಮಣ್ಯೇಶ್ವರ ಸ್ವಾಮಿಯು ಲಿಂಗದ ರೂಪದಲ್ಲಿದ್ದು, ನಾಗರಚೌಥಿಯಂದು ಈ ಕ್ಷೇತ್ರಕ್ಕೆ ಬಂದು ಪೂಜೆ ಸಲ್ಲಿಸಿದರೆ ಭಕ್ತರ ದೋಷಗಳು ನಿವಾರಣೆಯಾಗಿ ಭಾಗ್ಯ ಉಂಟಾಗುತ್ತದೆ ಎಂಬುದು ಭಕ್ತರ ನಂಬಿಕೆ. ಆಶ್ಚರ್ಯ ಏನಪ್ಪ ಎಂದರೆ ಈ ದೇವಸ್ಥಾನದ ಹುತ್ತದಲ್ಲಿರುವ ಹಾವು ವರ್ಷಕ್ಕೆ ಒಮ್ಮೆ ಹೊರಗೆ ಬಂದು ಭಕ್ತರಿಗೆ ದರ್ಶನವನ್ನು ನೀಡುತ್ತದೆಯಂತೆ. ಅಲ್ಲದೇ ನಾಗರ ಚೌಥಿಯಂದು ಹುತ್ತದ ಸಮೀಪಕ್ಕೆ ತೆರಳಿ ಸ್ವಾಮಿಯನ್ನು ಪೂಜೆ ಮಾಡಿದರೆ ಸಂತಾನ ಸಮಸ್ಯೆಯನ್ನು ಅನುಭವಿಸುತ್ತಿರುವವರಿಗೆ ಸಂತಾನ ಭಾಗ್ಯ ಉಂಟಾಗುತ್ತದೆ ಎಂದು ನಂಬಲಾಗಿದೆ.

ಹುತ್ತದ ಮಣ್ಣನ್ನು ಪ್ರಸಾದವಾಗಿ ಧರಿಸಿದರೆ ಅನೇಕ ವ್ಯಾಧಿಗಳಿಂದ ಮುಕ್ತಿಯನ್ನು ಹೊಂದಬಹುದು ಎಂಬುದು ಇಲ್ಲಿನ ಪ್ರತೀತಿ. ಅಲ್ಲದೇ ಇಲ್ಲಿ ಕಾಳಸರ್ಪದೋಷ ಸೇರಿದಂತೆ ಹಲವು ರೀತಿಯ ನಾಗದೋಷಗಳಿಂದ ಸಮಸ್ಯೆ ಅನುಭವಿಸುವವರು ಈ ಕ್ಷೇತ್ರದಲ್ಲಿ ದರ್ಶನ ಮಾಡಿ ಪೂಜೆ ಸಲ್ಲಿಸುವ ಮೂಲಕ ದೋಷದಿಂದ ಮುಕ್ತಿಯನ್ನು ಹೊಂದಬಹುದು ಎನ್ನುವುದು ಭಕ್ತರ ನಂಬಿಕೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ವಾಸ್ತು ಶಾಸ್ತ್ರದ ಪ್ರಕಾರ ಮನೆಯ ಯಾವ ದಿಕ್ಕಿಗೆ ಬಾವಿ ನಿರ್ಮಿಸಿದರೆ ಉತ್ತಮ ಗೊತ್ತಾ...?