Select Your Language

Notifications

webdunia
webdunia
webdunia
webdunia

ಈ ವರ್ಷ ಯಾವ ರಾಶಿಯವರು ಯಾವ ಹವಳ ಧರಿಸಬೇಕು? ಯಾವುದು ಶುಭ ದಿನ? ಇಲ್ಲಿದೆ ಡೀಟೈಲ್ಸ್

ಈ ವರ್ಷ ಯಾವ ರಾಶಿಯವರು ಯಾವ ಹವಳ ಧರಿಸಬೇಕು? ಯಾವುದು ಶುಭ ದಿನ? ಇಲ್ಲಿದೆ ಡೀಟೈಲ್ಸ್
ಬೆಂಗಳೂರು , ಮಂಗಳವಾರ, 1 ಜನವರಿ 2019 (09:28 IST)
ಬೆಂಗಳೂರು: ಈ ವರ್ಷ ನಿಮಗೆ ಕೈಗೊಂಡ ಕಾರ್ಯ‍ಗಳಲ್ಲಿ ಯಶಸ್ಸು ಸಿಕ್ಕಿ, ವರ್ಷವಿಡೀ ಲಾಭದಾಯಕವಾಗಿರಲು ಯಾವ ರಾಶಿಯವರು ಯಾವ ಹವಳ ಧರಿಸಬೇಕು? ಯಾವುದು ಶುಭ ದಿನ? ಸಂಖ್ಯೆ ಎನ್ನುವುದರ ಡೀಟೈಲ್ಸ್ ಇಲ್ಲಿದೆ ನೋಡಿ.


ಮೇಷ: ಈ ವರ್ಷ ಅರ್ಧದವರೆಗೆ ಅಷ್ಟಮದ ಗುರು ನಂತರ ರಾಹುವಿ ಪ್ರಭಾವ ಕಂಡುಬರಲಿದೆ. ಹೀಗಾಗಿ ತಾಳ್ಮೆ ಸಮಾಧಾನದಿಂದ ನಡೆದುಕೊಳ್ಳಬೇಕು. ಈ ರಾಶಿಯವರಿಗೆ ಈ ವರ್ಷ ಮಾಣಿಕ್ಯದ ಹವಳ, ಕನಕ ಪುಷ್ಯರಾಗ ಧರಿಸಿದರೆ ಶುಭ. ಹಾಗೆಯೇ 1,2,3,9  ನೇ ದಿನಾಂಕ ಶುಭ ಸಂಖ್ಯೆ,ಮಂಗಳವಾರ, ಗುರುವಾರ ಮತ್ತು ಭಾನುವಾರ ಶುಭದಿನವಾಗಲಿದೆ. ಕೆಂಪು, ಹಳದಿ, ಕೇಸರಿ ವಸ್ತ್ರ ಧರಿಸುವುದು ಉತ್ತಮ.

ವೃಷಭ: ಈ ರಾಶಿಯವರಿಗೆ ಈ ವರ್ಷ ಗುರುಬಲವಿದ್ದು, ರಾಹು ಕೂಡಾ ಲಾಭದಾಯಕನಾಗಲಿದ್ದಾನೆ. ಹೀಗಾಗಿ ಹೆಚ್ಚು ಶುಭ ಫಲ ಕಾಣುವಿರಿ. ಈ ರಾಶಿಯವರು ಈ ವರ್ಷ ವಜ್ರ, ಇಂದ್ರ ನೀಲ ಮತ್ತು ಪಚ್ಚೆ ಹವಳ ಧರಿಸುವುದು ಉತ್ತಮ. ಬುಧವಾರ, ಶುಕ್ರವಾರ, ಶನಿವಾರ ಶುಭ ದಿನ. 5,6,8 ಸಂಖ್ಯೆ ಶುಭ ಉಂಟುಮಾಡುವುದು. ಬಿಳಿ, ನೀಲಿ ಮತ್ತು ಹಸರು ವರ್ಣದ ವಸ್ತ್ರ ಧರಿಸಿ.

ಮಿಥುನ: ಈ ವರ್ಷ ಗುರು, ರಾಹು ಮತ್ತು ಶನಿ ಗ್ರಹದಿಂದ ಪ್ರತಿಕೂಲ ಪರಿಣಾಮಗಳು ಕಂಡುಬರಲಿವೆ. ಉತ್ತಮ ಫಲಗಳಿಗಾಗಿ ಪಚ್ಚೆ, ವಜ್ರ, ಇಂದ್ರ ನೀಲ ವಜ್ರ ಧರಿಸಿ. 3,5,6,8 ಶುಭ ಸಂಖ್ಯೆಗಳು. ಬುಧ, ಶುಕ್ರ, ಶನಿವಾರಗಳು ಶುಭದಿನಗಳು. ಹಸಿರು, ನೀಲಿ ಮತ್ತು ಬಿಳಿ ಬಣ್ಣದ ವಸ್ತ್ರ ಧರಿಸಿ.

ಕಟಕ: ಗುರು ಮತ್ತು ಶನಿ ಲಾಭದಾಯಕನಾಗಿರುವನು. ಹೀಗಾಗಿ ಸ್ಥಾನ, ಮಾನ, ಆರ್ಥಿಕ ಲಾಭ ಉಂಟಾಗುವುದು. ಉತ್ತಮ ಫಲಗಳಿಗಾಗಿ ಮುತ್ತು, ಹವಳ, ಕನಕಪುಷ್ಯರಾಗ ಧರಿಸಿ. 2,3,9 ಸಂಖ್ಯೆಗಳು ಶುಭ ಫಲ ನೀಡುವುದು. ಸೋಮವಾರ, ಮಂಗಳ ಮತ್ತು ಗುರುವಾರ ಶುಭ ದಿನ. ಬಿಳಿ, ಕೆಂಪು ಮತ್ತು ಹಳದಿ ವಸ್ತ್ರ ಧರಿಸಿ.

ಸಿಂಹ: ವರ್ಷದ ಮಧ್ಯಾವಧಿವರೆಗೆ ಪಂಚಮ ಶನಿ, ದ್ವಾದಶದ ರಾಹುಗ್ರಹದ ಪ್ರತಿಕೂಲ ಪರಿಣಾಮ ಎದುರಿಸಬೇಕಾದೀತು. ಉತ್ತಮ ಫಲಗಳಿಗಾಗಿ ಹವಳ, ಮಾಣಿಕ್ಯ, ಕನಕ ಪುಷ್ಯರಾಗ ರತ್ನ ಧರಿಸಿ. 1,3,5,9 ಶುಭ ಸಂಖ್ಯೆ. ಮಂಗಳ, ಗುರು ಮತ್ತು ಭಾನುವಾರ ಶುಭ ದಿನ. ರಕ್ತ ವರ್ಣ, ಹಳದಿ ಮತ್ತು ಕೇಸರಿ ವರ್ಣದ ವಸ್ತ್ರ ಧರಿಸಿ.

ಕನ್ಯಾ: ರಾಹು ಲಾಭದಾಯಕನಾಗಿರುವುದರಿಂದ ತಕ್ಕಮಟ್ಟಿಗಿನ ಸಮಾಧಾನ, ಲಾಭ ಗಳಿಸುವಿರಿ. ಇನ್ನಷ್ಟು ಶುಭ ಫಲಗಳಿಗೆ ವಜ್ರ, ಇಂದ್ರ ನೀಲ, ಪಚ್ಚಕಲ್ಲಿನ ರತ್ನ ಧರಿಸಿ. 3,5,6,8 ಶುಭ ಸಂಖ್ಯೆಗಳು. ಬುಧ, ಶುಕ್ರ ಮತ್ತು ಶನಿವಾರ ಶುಭದಿನಗಳು. ಹಸಿರು, ನೀಲಿ ಮತ್ತು ಬಿಳಿ ಬಣ್ಣದ ವಸ್ತ್ರ ಧರಿಸಿ.

ತುಲಾ: ಗುರು ಗ್ರಹ ಮತ್ತು ಶನಿ ಲಾಭದಾಯಕನಾಗಿ ಶುಭ ಫಲಗಳನ್ನು ಕೊಡುವನು. ಮತ್ತಷ್ಟು ಶುಭ ಫಲಗಳಿಗಾಗಿ ವಜ್ರ, ಇಂದ್ರ ನೀಲ ಮತ್ತು ಪಚ್ಚೆಕಲ್ಲಿನ ರತ್ನ ಧರಿಸಿ. ಶುಕ್ರವಾರ, ಶನಿವಾರ ಮತ್ತು ಬುಧವಾರ ಶುಭ ದಿನ. 5,6,8 ಶುಭ ಸಂಖ್ಯೆಗಳು. ಬಿಳಿ, ನೀಲಿ, ಹಸಿರು ಶುಭ ಬಣ್ಣಗಳು.

ವೃಶ್ಚಿಕ: ಶನಿ ಗ್ರಹದ ಪ್ರಭಾವದಿಂದ ಕೈಗೊಂಡ ಕಾರ್ಯಗಳಲ್ಲಿ ಪ್ರತಿಕೂಲ ಪರಿಣಾಮಗಳು ಬೀರುವುದು. ಶುಭ ಫಲಗಳಿಗಾಗಿ ಹವಳ, ಕನಕ ಪುಷ್ಯ ರಾಗ ಮತ್ತು ಮಾಣಿಕ್ಯ ಧರಿಸಿ. 1,2,3,9 ಶುಭ ಸಂಖ್ಯೆಗಳು. ರಕ್ತ ವರ್ಣ, ಹಳದಿ, ಕೇಸರಿ ಶುಭ ವರ್ಣಗಳು. ಮಂಗಳ, ಗುರು ಮತ್ತು ಭಾನುವಾರ ಶುಭ ದಿನಗಳು.

ಧನು: ಅಷ್ಟಮದಲ್ಲಿ ರಾಹು, ಗುರುವಿನ ಪ್ರತಿಕೂಲತೆಯಿಂದ ಕಾರ್ಯಗಳಲ್ಲಿ ಹಿನ್ನಡೆಯಾದೀತು. ಶುಭ ಫಲಗಳಿಗಾಗಿ ಕನಕ ಪುಷ್ಯರಾಗ, ಹವಳ ಮತ್ತು ಮಾಣಿಕ್ಯ ಧರಿಸಿ. ಹಳದಿ, ರಕ್ತವರ್ಣ, ಕೇಸರಿ ಶುಭ ವರ್ಣಗಳು. ಗುರು, ಭಾನು ಮತ್ತು ಮಂಗಳವಾರ ಶುಭ ದಿನಗಳು. 1,3,8,9 ಶುಭ ಸಂಖ್ಯೆಗಳು.

ಮಕರ: ಗುರುಬಲದಿಂದಾಗಿ ವರ್ಷಾಂತ್ಯದವರೆಗೆ ಉತ್ತಮ ಫಲಗಳನ್ನು ಕಾಣುವಿರಿ. ಇಂದ್ರನೀಲ, ಪಚ್ಚೆ ಮತ್ತು ವಜ್ರದ ರತ್ನಗಳು ಶುಭ. ಬುಧವಾರ, ಶುಕ್ರವಾರ ಮತ್ತು ಶನಿವಾರ ಶುಭ ದಿನಗಳು. 4,5,6,8 ಶುಭ ಸಂಖ್ಯೆಗಳು. ಬಿಳಿ, ಕಪ್ಪು ಮತ್ತು ನೀಲಿ ಶುಭ ವರ್ಣಗಳು.

ಕುಂಭ: ಶನಿ ಲಾಭಕಾರಕನೂ, ರಾಹುವಿನಿಂದಾಗಿ ಕೈಗೊಂಡ ಕಾರ್ಯಗಳಲ್ಲಿ ಜಯವನ್ನೂ ಸಾಧಿಸುವಿರಿ. ಶುಭ ಫಲಗಳಿಗಾಗಿ ವಜ್ರ, ಕಡುನೀಲಿ ಮತ್ತು ಪಚ್ಚೆಕಲ್ಲು ಧರಿಸಿ. 4,5,6,8 ಶುಭ ಸಂಖ್ಯೆಗಳು. ಶನಿ, ಶುಕ್ರ ಮತ್ತು ಬುಧವಾರ ಶುಭ ದಿನಗಳು. ಬಿಳಿ, ಹಸಿರು, ನೀಲಿ ಶುಭ ವರ್ಣಗಳು.

ಮೀನ: ಗುರುಬಲದಿಂದಾಗಿ ಅಂದುಕೊಂಡ ಕಾರ್ಯಗಳು ನೆರವೇರುವುದು. ಶನಿ ಕೊಂಚ ಸಮಸ್ಯೆ ತಂದೊಡ್ಡುತ್ತಾನೆ. ಶುಭ ಫಲಗಳಿಗಾಗಿ ಕನಕಪುಷ್ಯರಾಗ, ಮಾಣಿಕ್ಯ, ಹವಳ ರತ್ನ ಧರಿಸಿ. 1,3,6,8 ಶುಭ ಸಂಖ್ಯೆಗಳು. ಗುರು, ಭಾನು ಮತ್ತು ಮಂಗಳವಾರ ಶುಭ ವಾರಗಳು. ಹಳದಿ, ಕೇಸರಿ ಮತ್ತು ರಕ್ತವರ್ಣ ಶುಭ ವರ್ಣಗಳು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.        

Share this Story:

Follow Webdunia kannada

ಮುಂದಿನ ಸುದ್ದಿ

ಹೊಸ ವರ್ಷದ ಹೊಸ ದಿನ ಹೇಗಿರುತ್ತೆ? ರಾಶಿ ಭವಿಷ್ಯ