ಜನ್ಮ ದಿನಾಂಕಕ್ಕೆ ಅನುಗುಣವಾಗಿ ಈ ವರ್ಷ ನಿಮ್ಮ ಭವಿಷ್ಯ ಹೇಗಿರುತ್ತದೆ ಗೊತ್ತಾ?

ಸೋಮವಾರ, 11 ಫೆಬ್ರವರಿ 2019 (08:58 IST)
ಬೆಂಗಳೂರು: ಜನ್ಮ ದಿನಾಂಕಕ್ಕೆ ಅನುಗುಣವಾಗಿ ಒಬ್ಬೊಬ್ಬರಿಗೆ ಅದೃಷ್ಟ ಸಂಖ್ಯೆ ಎಂದಿರುತ್ತದೆ. ಆಯಾ ಜನ್ಮ ದಿನಾಂಕಕ್ಕೆ ಅನುಸಾರವಾಗಿ ನಮ್ಮ ಭವಿಷ್ಯವೂ ನಿರ್ಧಾರವಾಗುತ್ತದೆ. ಇದೀಗ ಆಯಾ ಜನ್ಮ ದಿನಾಂಕಕ್ಕೆ ಅನುಸಾರವಾಗಿ ನಿಮ್ಮ ಈ ವರ್ಷದ ಭವಿಷ್ಯ ಹೇಗಿದೆ ಎಂದು ತಿಳಿಯುತ್ತಾ ಸಾಗೋಣ.


ಜನ್ಮ ದಿನಾಂಕ 5
ನಿಮ್ಮ ಜನ್ಮ ದಿನಾಂಕ 5 ಆಗಿದ್ದಲ್ಲಿ ಕಳೆದ ವರ್ಷ ನೀವು ಕಳೆದುಕೊಂಡಿದ್ದನ್ನು, ಮಾಡಿದ ತಪ್ಪುಗಳನ್ನು ಸರಿಪಡಿಸುವ ಕಾಲ. ಹೊಸದಾಗಿ ಜೀವನ ಕಟ್ಟಲು ಶುರು ಮಾಡುತ್ತೀರಿ. ಆದರೆ ಮುಂದಿನ ದಿನಗಳಲ್ಲಿ ನಿಮ್ಮನ್ನು ಅಷ್ಟಾಗಿ ಬಾಧಿಸದ ವಿಚಾರದ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಲು ಹೋಗಬೇಡಿ.

ಸಣ್ಣ ಪುಟ್ಟ ವಿಚಾರಗಳಿಗೆ ಹೆಚ್ಚು ಆದ್ಯತೆ ಕೊಡಿ. ಅದು ನಿಮ್ಮನ್ನು ಮುಂದೆ ದೊಡ್ಡ ಹಾದಿಯೆಡೆಗೆ ಕರೆದೊಯ್ಯಲಿದೆ. ಈ ವರ್ಷ ನಿಮಗೆ ಮೇ ಮತ್ತು ಆಗಸ್ಟ್ ತಿಂಗಳು ಹೆಚ್ಚು ಶುಭ ಪಲ ಕೊಡಲಿದೆ. ನಿಮ್ಮ ಗುರಿಯೆಡೆಗಿನ ಪಯಣದ ಏಕಾಗ್ರತೆಗೆ ಭಂಗವಾಗದಂತೆ ನೋಡಿಕೊಂಡರೆ ಸಾಕು!

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ

LOADING