Select Your Language

Notifications

webdunia
webdunia
webdunia
webdunia

ಗುಡುಗು ಸಿಡಿಲಿನ ಶಬ್ದ ಕೇಳಿ ನಮ್ಮ ಹಿರಿಯರು , ಫಲ್ಗುಣಾ ಎಂದು ಜಪಿಸುವುದ್ಯಾಕೆ ಗೊತ್ತಾ?

ಗುಡುಗು ಸಿಡಿಲಿನ ಶಬ್ದ ಕೇಳಿ ನಮ್ಮ ಹಿರಿಯರು , ಫಲ್ಗುಣಾ ಎಂದು ಜಪಿಸುವುದ್ಯಾಕೆ ಗೊತ್ತಾ?
ಬೆಂಗಳೂರು , ಶುಕ್ರವಾರ, 8 ಜೂನ್ 2018 (14:13 IST)
ಬೆಂಗಳೂರು : ಮಳೆಗಾಲದಲ್ಲಿ ಗುಡುಗು ಸಿಡಿಲು ಸಾಮಾನ್ಯ. ಸಿಡಿಲು ಹೆಚ್ಚಾಗಿ ಮರ ಗಿಡಗಳಿಗೆ ಬಡಿಯುವುದನ್ನು ನೋಡಿರುತ್ತೇವೆ. ಆಗಾಗ ಜನರಿಗೂ ಬಡಿದು ಸಾವು ನೋವು ಸಂಭವಿಸುತ್ತಿರುತ್ತದೆ. ಸಿಡಿಲು ಬೀಳುವಾಗ ದೊಡ್ದ ಸದ್ದು ಬರುತ್ತದೆ. ಮನೆಯಲ್ಲಿ ಮಕ್ಕಳು ಈ ಶಬ್ದಕ್ಕೆ ಬೆಚ್ಚಿಬೀಳುತ್ತಿರುತ್ತಾರೆ. ಆಗ ಮಕ್ಕಳ ಜತೆಗೆ ದೊಡ್ಡವರು ಭಯ ದೂರ ಮಾಡಿಕೊಳ್ಳಲು ಅರ್ಜುನಾ, ಫಲ್ಗುಣಾ ಎಂದು ಜಪಿಸುತ್ತಿರುತ್ತಾರೆ. ಈ ರೀತಿ ಯಾಕೆ ಜಪಿಸುತ್ತಾರೆ. ಇದರ ಹಿಂದಿನ ಮರ್ಮ ಏನು ಎಂಬುದನ್ನು ಇಲ್ಲಿದೆ ನೋಡಿ .


ಮಹಾಭಾರತದಲ್ಲಿ ವಿರಾಟರಾಜನ ಮಗನಾದ ಉತ್ತರನು ತಮ್ಮ ಗೋವುಗಳನ್ನು ಅಪಹರಿಸಿದ ಕೌರವರ ಸೇನೆಯ ಜೊತೆಗೆ ಯುದ್ಧಕ್ಕೆ ನಿಂತಾಗ ಎದುರಿಗಿದ್ದ ಶತ್ರು ಸೇನೆಯನ್ನು ನೋಡಿ ಉತ್ತರ ಕುಮಾರ ಭಯದಿಂದ ಓಡಿಹೋಗುತ್ತಾನೆ. ಆಗ ಆತನನ್ನು ತಡೆದ ಅರ್ಜುನ ತನ್ನ ಹತ್ತುನಾಮಗಳಾದ ಅರ್ಜುನಾ, ಫಲ್ಗುಣಾ, ಭೀಭತ್ಸ, ಕಿರೀಟಿ, ಸವ್ಯಸಾಚಿ, ಕೃಷ್ಣ, ಧನಂಜಯ, ಶ್ವೇತವಾಹನ, ವಿಜಯ, ಪಾರ್ಥ ಎಂದು ಜಪಿಸಲು ಉತ್ತರನಿಗೆ ಹೇಳುತ್ತಾನೆ. ಅದನ್ನು ಜಪಿಸಿದ ಉತ್ತರನಿಗೆ ಭಯ ನಿವಾರಣೆಯಾಗುತ್ತದೆ. ಆದಕಾರಣ  ನಮ್ಮ ಹಿರಿಯರು ಗುಡುಗು ಸಿಡಿಲಿನ ಶಬ್ದ ಕೇಳಿದಾಗ ಭಯ ಹೋಗಲಾಡಿಸಲು ಅರ್ಜುನಾ, ಫಲ್ಗುಣಾ ಎಂದು ಜಪಿಸುತ್ತಿರುತ್ತಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಶುಕ್ರವಾರ ಮನೆಯ ಹೊಸ್ತಿಲಿಗೆ ಈ ಬಣ್ಣದ ಹೂಗಳನ್ನಿಟ್ಟು ಪೂಜಿಸಿದರೆ ಲಕ್ಷ್ಮೀ ಆ ಮನೆಯನ್ನು ಪ್ರವೇಶಿಸುತ್ತಾಳಂತೆ!