Select Your Language

Notifications

webdunia
webdunia
webdunia
webdunia

ಯಾವ ವಾರ ಯಾವ ದೇವರನ್ನು ಪೂಜಿಸಿದರೆ ಕಷ್ಟಗಳು ದೂರವಾಗುತ್ತದೆ ಎಂಬುದನ್ನು ತಿಳಿಬೇಕಾ?

ಯಾವ ವಾರ ಯಾವ ದೇವರನ್ನು ಪೂಜಿಸಿದರೆ ಕಷ್ಟಗಳು ದೂರವಾಗುತ್ತದೆ ಎಂಬುದನ್ನು ತಿಳಿಬೇಕಾ?
ಬೆಂಗಳೂರು , ಭಾನುವಾರ, 12 ಆಗಸ್ಟ್ 2018 (06:42 IST)
ಬೆಂಗಳೂರು : ಹಿಂದೂ ಸಂಪ್ರದಾಯದಲ್ಲಿ ವಾರದ ಒಂದೊಂದು ದಿನಕ್ಕೂ ಒಂದೊಂದು ವಿಶೇಷವಾದ  ಮಹತ್ವವಿದೆ. ಹಾಗೆಯೇ ಒಂದೊಂದು ದಿನ ಒಂದೊಂದು ದೇವರಿಗೆ ಪೂಜೆಯನ್ನು ಮಾಡಿದರೆ ಅದರಲ್ಲಿ ಬರುವ ಪ್ರಯೋಜನಗಳಲ್ಲಿ ತುಂಬಾ ವೈಶಿಷ್ಟ್ಯತೆ ಇರುತ್ತದೆ. ಹಿಂದೂ ಚಂದ್ರಮಾನ ಪಂಚಾಗದ  ಪ್ರಕಾರ ಒಂದೊಂದು ದಿನ ಒಂದೊಂದು ದೇವರು ಅಧಿಪತಿಯಾಗಿದ್ದಾರೆ ಅದರಂತೆ ಆದಿನ ಅಧಿಪತಿಯಾದ ದೇವರನ್ನು ಪೂಜಿಸಿದರೆ.ಆ ದೇವರ ಅನುಗ್ರಹ ಖಂಡಿತವಾಗಿಯೂ ಸಿಗುತ್ತದೆ .


*ಭಾನುವಾರದ ದಿನ ಸೂರ್ಯೋದಯಕ್ಕೂ ಮುಂಚೆ ಎದ್ದು ಸ್ನಾನ ಮಾಡಿದ ನಂತರ ಸೂರ್ಯ ನಮಸ್ಕಾರವನ್ನು ಮಾಡಿ,  ರಾಗಿ ಚೊಂಬಿನಿಂದ  ನೀರನ್ನು ಸೂರ್ಯ ದೇವನಿಗೆ ಸಮರ್ಪಿಸಬೇಕು. ನಂತರ ದೇವರಿಗೆ ನೈವೇದ್ಯವಾಗಿ ಪಾಯಸ ಇಟ್ಟು ಪೂಜೆ ಮಾಡಿದರೆ ಅನಾರೋಗ್ಯದಿಂದ ಬಳಲುತ್ತಿರುವವರು ಚೇತರಿಸಿಕೊಳ್ಳಬಹುದು.

*ಸೋಮವಾರ ರಜಾ ದಿನ ಮಹಾಶಿವನಿಗೆ ಇಷ್ಟವಾದ ದಿನ,ಆ ದಿನ ಮಹಾಶಿವನಿಗೆ ಅಕ್ಕಿ ಬೆಲ್ಲ,ಹಾಲಿನಿಂದ ಮಾಡಿದ ಪಾಯಸವನ್ನು ನೈವೇದ್ಯವಾಗಿ ಸಮರ್ಪಿಸುವುದರಿಂದ ಆ ಶಿವನ ಅನುಗ್ರಹಕ್ಕೆ ಪಾತ್ರರಾಗಬಹುದು.

*ಮಂಗಳವಾರದ ದಿನ ಆಂಜನೇಯ ಸ್ವಾಮಿ ಮತ್ತು ದುರ್ಗಾ ದೇವಿಯನ್ನು ಪೂಜಿಸಿದರೆ ತುಂಬಾ ಒಳ್ಳೆಯದು. ಆ ದಿನ ರಾಹು ಕಾಲದಲ್ಲಿ ದುರ್ಗಾ ದೇವಿಯನ್ನು ಎರಡು ನಿಂಬೆಹಣ್ಣಿನ ಸಿಪ್ಪೆಯಿಂದ ದೀಪಾರಾಧನೆ (ನಿಂಬೆಹಣ್ಣಿನ ದೀಪ)  ಮಾಡಿದರೆ ಎಲ್ಲಾ ಕಷ್ಟಗಳು ದೂರವಾಗುತ್ತವೆ.

ಮಂಗಳವಾರದ ದಿನ ಗಣೇಶನಿಗೆ  ಗರಿಕೆ ಹುಲ್ಲನ್ನು ಸಮರ್ಪಿಸಿ ಪೂಜೆ ಮಾಡಿದರೆ ವಿಜ್ಞಗಳು ದೂರವಾಗಿ ಇಷ್ಟಾರ್ಥ ಸಿದ್ಧಿ ದೊರೆಯುತ್ತದೆ.

*ಬುಧುವಾರದ ದಿನ ಶ್ರೀ ಕೃಷ್ಣನಿಗೆ ತುಂಬಾ ಪ್ರೀತಿಕರವಾದ ದಿನ. ಹೊಸ ಕೆಲಸವನ್ನು ಪ್ರಾರಂಭಿಸಬೇಕು ಅನ್ನುವವರು ಆ ದಿನ ತುಳಸಿ ಎಲೆಗಳಿಂದ ಆ ವಿಠಲ ದೇವರನ್ನು ಪೂಜಿಸಿದರೆ ಅದು ದಿಗ್ವಿಜಯ ಆಗುತ್ತದೆ.

ಗುರುವಾರದ ದಿನ ರಾಘವೇಂದ್ರ ಸ್ವಾಮಿ, ಸಾಯಿಬಾಬಾ ,ದತ್ತಾತ್ರೇಯ ಸ್ವಾಮಿಯನ್ನು ಪೂಜೆ ಮಾಡಿದರೆ ತ್ವರಿತವಾಗಿ ಅನುಗ್ರಹ ಸಿಗುತ್ತದೆ.

ಶುಕ್ರವಾರ ಅಂದರೆ ಮಹಾಲಕ್ಷ್ಮೀಗೆ  ತುಂಬಿ ಪ್ರೀತಿಕರವಾದ ದಿನ.ಆದ್ದರಿಂದ ಆ ದಿನ ಕೆಂಪು,ಹಸಿರು,ಬಣ್ಣದ ವಸ್ತ್ರವನ್ನು ಧರಿಸಿ ದೀಪಾರಾಧನೆ ಮಾಡಿದರೆ ಅಷ್ಟ ಐಶ್ವರ್ಯಗಳು ದೊರೆಯುತ್ತವೆ.

ಶನಿವಾರದ ದಿನ ವೆಂಕಟೇಶ್ವರ ಸ್ವಾಮಿಯನ್ನು ಪೂಜೆ ಮಾಡಿದರೆ ಸಂಕಷ್ಟದಿಂದ ನಾವು ದೂರಾಗಬಹುದು. ಹಾಗೆಯೇ ಆ ದಿನ 8 ಬಾದಾಮಿ ಹಣ್ಣು,ಉದ್ದಿನ ಬೇಳೆ, ಕಪ್ಪು ಎಳ್ಳನ್ನು ದಾನ ಮಾಡಿದರೆ ಶನೈಶ್ಚರ ಸ್ವಾಮಿಯ ಕೃಪೆಯನ್ನು ಪಡೆಯಬಹುದು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ತಾಮ್ರದ ಸೂರ್ಯನನ್ನು ಮನೆಯಲ್ಲಿ ತಂದಿಟ್ಟುಕೊಳ್ಳುವುದರಿಂದ ಏನಾಗುತ್ತದೆ ಗೊತ್ತಾ?