Select Your Language

Notifications

webdunia
webdunia
webdunia
webdunia

ಮನೆಯಲ್ಲಿ ಯಾವ ಪ್ರಾಣಿಗಳನ್ನು ಸಾಕಿದರೆ ಶುಭ-ಅಶುಭ ಎಂಬುದು ತಿಳಿಬೇಕಾ

ಮನೆಯಲ್ಲಿ ಯಾವ ಪ್ರಾಣಿಗಳನ್ನು ಸಾಕಿದರೆ ಶುಭ-ಅಶುಭ ಎಂಬುದು ತಿಳಿಬೇಕಾ
ಬೆಂಗಳೂರು , ಸೋಮವಾರ, 19 ನವೆಂಬರ್ 2018 (12:44 IST)
ಬೆಂಗಳೂರು : ಕೆಲವರು ಮನೆಯಲ್ಲಿ ಪ್ರಾಣಿ ಪಕ್ಷಿಗಳನ್ನು ಸಾಕುತ್ತಾರೆ. ಹಿಂದಿನ ಕಾಲದಿಂದಲೂ ಈ ಪದ್ಧತಿ ರೂಢಿಯಲ್ಲಿತ್ತು. ಆದರೆ ಶಾಶ್ತ್ರಗಳ ಪ್ರಕಾರ ಕೆಲವು ಪ್ರಾಣಿ ಪಕ್ಷಿಗಳನ್ನು ಸಾಕುವುದರಿಂದ ಮನೆಗೆ ಶುಭವಾದರೆ ಇನ್ನು ಕೆಲವು ಅಶುಭಕ್ಕೆ ಕಾರಮನವಾಗುತ್ತವೆ.


ಬಹುತೇಕರ ಮನೆಯಲ್ಲಿ ನಾಯಿ ಸಾಕುತ್ತಾರೆ. ನಾಯಿಯನ್ನು ಹಿಂದೂ ಧರ್ಮದಲ್ಲಿ ದೇವರಿಗೆ ಹೋಲಿಸಲಾಗಿದೆ. ನಾಯಿಯನ್ನು ಪ್ರಾಮಾಣಿಕತೆಗೂ ಹೋಲಿಸಲಾಗುತ್ತದೆ. ಶಾಸ್ತ್ರದ ಪ್ರಕಾರ ಕಪ್ಪು ಬಣ್ಣದ ನಾಯಿ ಧನವೃದ್ಧಿಗೆ ಕಾರಣವಾಗುತ್ತದೆಯಂತೆ.

ಹಾಗೇ ಅನೇಕರ ಮನೆಯಲ್ಲಿ ಬೆಕ್ಕನ್ನು ಸಾಕುತ್ತಾರೆ. ಆದ್ರೆ ಪುರಾಣಗಳ ಪ್ರಕಾರ ಪದೇ ಪದೇ ಮನೆಗೆ ಬೆಕ್ಕು ಬರೋದು ಅಶುಭವಂತೆ.


ಐಶ್ವರ್ಯ ಹಾಗೂ ಶಾಂತಿಗಾಗಿ ಮನೆಯಲ್ಲಿ ಕುದುರೆ ಸಾಕಬೇಕು. ಒಂದು ವೇಳೆ ಇದು ಸಾಧ್ಯವಾಗದೆ ಹೋದಲ್ಲಿ ಕುದುರೆ ಪ್ರತಿಮೆಯನ್ನು ಮನೆಯಲ್ಲಿ ಇಡಬಹುದು. ಮೊಲ ಸಾಕಣೆ ಮಕ್ಕಳಿಗೆ ಶುಭವೆಂದು ಪರಿಗಣಿಸಲಾಗಿದೆ. ಚೇಳು, ಹೆಬ್ಬಾವು ಹಾಗೂ ಬಾವಲಿಗಳು ಮನೆಯಲ್ಲಿರುವುದು ಅಶುಭ.


ಆದರೆ ಮನೆಯ ಹೊರಗೆ ಕಾಣಿಸುವ ಕಪ್ಪೆಗಳನ್ನು ಸಾಕುವವರು ಯಾರೂ ಇಲ್ಲ. ಆದ್ರೆ ಕಪ್ಪೆ ದೇವರ ರೂಪವಾಗಿದ್ದು ಅದು ಮನೆಯಲ್ಲಿದ್ದರೆ ಲಕ್ಷ್ಮಿ ವಾಸಿಸುತ್ತಾಳೆಂಬ ನಂಬಿಕೆ ಇದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ರಾಶಿ ಭವಿಷ್ಯ