Select Your Language

Notifications

webdunia
webdunia
webdunia
webdunia

ಲಕ್ಷ್ಮಿಕಟಾಕ್ಷವಿರಲು ಆ ಮನೆಯಲ್ಲಿ ಈ 5 ವಸ್ತುಗಳು ಇರಲೇಬೇಕಂತೆ

ಲಕ್ಷ್ಮಿಕಟಾಕ್ಷವಿರಲು ಆ ಮನೆಯಲ್ಲಿ ಈ 5 ವಸ್ತುಗಳು ಇರಲೇಬೇಕಂತೆ
ಬೆಂಗಳೂರು , ಸೋಮವಾರ, 10 ಸೆಪ್ಟಂಬರ್ 2018 (11:26 IST)
ಬೆಂಗಳೂರು : ಲಕ್ಷ್ಮಿ ದೇವಿಯನ್ನು ಪೂಜಿಸಿದರೆ ಹಣದೊಂದಿಗೆ ಶುಭವಾಗುತ್ತದೆ ಎಂಬುದು ಎಲ್ಲರಿಗೂ ಗೊತ್ತು. ಯಾಕೆಂದರೆ ಹಿಂದೂ ಪುರಾಣಗಳ ಪ್ರಕಾರ ಲಕ್ಷ್ಮಿದೇವಿ ಧನಕ್ಕೆ, ಐಶ್ವರ್ಯಕ್ಕೆ ಅಧಿಪತಿ. ಆಕೆಯನ್ನು ಪೂಜಿಸಿದರೆ ಎಲ್ಲವೂ ಶುಭವಾಗುತ್ತದೆ. ಹಾಗೇ  ಲಕ್ಷ್ಮಿಕಟಾಕ್ಷ ಮನೆಯಲ್ಲಿ ನೆಲೆಸಿರಬೇಕೆಂದರೆ ಆ ಮನೆಯಲ್ಲಿ ಈ 5 ವಸ್ತುಗಳು ಇರಲೇಬೇಕು.


*ಒಂದು ನವಿಲು ಗರಿ ತಂದುಕೊಂಡು ಅದನ್ನು ನೀವು ಲಕ್ಷ್ಮಿ ದೇವಿಯನ್ನು ಪೂಜಿಸುವ ಬಳಿ ಇಡಬೇಕು. ಇದರಿಂದ ಆ ದೇವಿ ಅನುಗ್ರಹ ಸಿಗುತ್ತದೆ. ಅಷ್ಟೇ ಅಲ್ಲದೆ, ನವಿಲು ಗರಿಯನ್ನು ಮನೆಯಲ್ಲಿ ಇಟ್ಟುಕೊಳ್ಳುವುದರಿಂದ ನೆಗಟೀವ್ ಶಕ್ತಿ ಎಲ್ಲಾ ದೂರವಾಗುತ್ತದೆ. ಪಾಸಿಟೀಟ್ ಎನರ್ಜಿ ಬರುತ್ತದೆ. ಇದರಿಂದ ನಮಗೆ ಸಾಕಷ್ಟು ಒಳಿತಾಗುತ್ತದೆ


*ಬಂಗಾರ ಅಥವಾ ಬೆಳ್ಳಿಯಿಂದ ಮಾಡಿದ ನಾಣ್ಯವನ್ನು ಪೂಜಾಕೋಣೆಯಲ್ಲಿ ಇಡಬೇಕು. ಆ ನಾಣ್ಯದ ಮೇಲೆ ಲಕ್ಷ್ಮಿದೇವಿ, ವಿನಾಯಕ ಇದ್ದರೆ ಇನ್ನೂ ಒಳಿತು. ಇದರಿಂದ ಅಪಾರ ಸಂಪತ್ತು ಉಂಟಾಗುತ್ತದೆ

*ತಾವರೆ ಹೂವು ಎಂದರೆ ಲಕ್ಷ್ಮಿದೇವಿಗೆ ಎಷ್ಟೋ ಇಷ್ಟ. ಆ ದೇವಿ ತಾವರೆ ಹೂವಿನ ಮೇಲೆ ಕುಳಿತುಕೊಳ್ಳುತ್ತದೆ ಆದಕಾರಣ ಇದರಿಂದ ಆಕೆಯನ್ನು ಪೂಜಿಸಿದರೆ ಎಲ್ಲಾ ಲಾಭಗಳೇ ಉಂಟಾಗುತ್ತವೆ. ಹಣ ಚೆನ್ನಾಗಿ ಕೈಸೇರುತ್ತದಂತೆ.

*ಲಕ್ಷ್ಮಿದೇವಿ ತಾವರೆಹೂವಿನ ಮೇಲೆ ಕುಳಿತು ಸಂಪತ್ತು ಕರುಣಿಸುತ್ತಿರುವಂತೆ ಚಿತ್ರಪಟದಲ್ಲಿ ಅಥವಾ ಪ್ರತಿಮೆಯನ್ನು ಮನೆಯಲ್ಲಿ ಇಟ್ಟುಕೊಂಡು ನಿತ್ಯ ಪೂಜಿಸಬೇಕು. ಇದರಿಂದ ಸಂಪತ್ತು ಸಿಗುತ್ತದಂತೆ. ಇದರಿಂದ ಮನೆಯಲ್ಲಿ ಎಲ್ಲರಿಗೂ ಒಳಿತೆ ಆಗುತ್ತದಂತೆ.

*ಮಹಿಳೆಯರು ಹಣೆಗೆ ಧರಿಸುವ ಕುಂಕುಮ, ಕೈಗಳಿಗೆ ಧರಿಸುವ ಬಳೆ, ಗೋರಂಟಿಯಂತಹ ಹಲವು ವಿಧದ ಅಲಂಕರಣ ವಸ್ತುಗಳನ್ನು ಮನೆಯಲ್ಲಿ ಇಟ್ಟುಕೊಳ್ಳಬೇಕಂತೆ. ಇದರಿಂದ ಅವರಿಗೆ ಒಳಿತಾಗಿ ಸಂಪತ್ತು ಸಿದ್ಧಿಸುತ್ತದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ರಾಶಿ ಭವಿಷ್ಯ