Select Your Language

Notifications

webdunia
webdunia
webdunia
webdunia

ಗಣೇಶನ ಪೂಜೆಗೆ ತುಳಸಿಯನ್ನು ಬಳಸುವಂತಿಲ್ಲ. ಯಾಕೆ ಗೊತ್ತಾ?

ಗಣೇಶನ ಪೂಜೆಗೆ ತುಳಸಿಯನ್ನು ಬಳಸುವಂತಿಲ್ಲ. ಯಾಕೆ ಗೊತ್ತಾ?
ಬೆಂಗಳೂರು , ಭಾನುವಾರ, 15 ಜುಲೈ 2018 (14:51 IST)
ಬೆಂಗಳೂರು : ಹಿಂದೂ ಸಂಪ್ರದಾಯದಲ್ಲಿ ತುಳಸಿ ಗಿಡಕ್ಕೆ ತುಂಬಾ ಮಹತ್ವವಿದೆ. ವಿಷ್ಣು ಮತ್ತು ಕೃಷ್ಣನ ಪೂಜೆಯು ತುಳಸಿ ಇಲ್ಲದೆ ಸಂಪೂರ್ಣಗೊಳ್ಳುವುದೇ ಇಲ್ಲ. ಆದರೆ ವಿಘ್ನಗಳನ್ನು ನಿವಾರಿಸುವ ಗಣೇಶನ ಪೂಜೆಗೆ ಮಾತ್ರ ತುಳಸಿಯನ್ನು  ಬಳಸುವಂತಿಲ್ಲ. ಹಾಗಾದ್ರೆ ಇದಕ್ಕೆ ಕಾರಣವೇನು ಎಂಬುದನ್ನು ತಿಳಿಯೋಣ.


ಯಮುನಾ ದಂಡೆಯ ತೀರದಲ್ಲಿ ಒಮ್ಮೆ ಗಣಪತಿ ಧ್ಯಾನಸ್ಥನಾಗಿರುತ್ತಾನೆ. ತುಳಸಿ ಅನ್ನುವ ಹುಡುಗಿ ಅಲ್ಲಿ ಹೋಗುತ್ತಿರುತ್ತಾಳೆ. ಆಕೆ ಗಣೇಶನನ್ನು ನೋಡಿದಾಗ ಆಕರ್ಷಿತಳಾಗಿ ತನ್ನನ್ನು ಮದುವೆಯಾಗುವಂತೆ ವಿನಾಯಕನನ್ನು ಕೇಳಿಕೊಳ್ಳುತ್ತಾಳೆ. ಆದರೆ ಆಕೆಯ ಆಸೆಗೆ ತಣ್ಣೀರೆರಚುವ ಗಣೇಶ, ಸಹನೆಯಿಂದ ನಿರಾಕರಿಸುತ್ತಾನೆ. ಇದರಿಂದ ಕೋಪೋದ್ರಿಕ್ತಗೊಳ್ಳುವ ತುಳಸಿ, ಗಣೇಶನಿಗೆ ಎರಡೆರಡು ಬಾರಿ ಮದುವೆಯಾಗುವಂತೆ ಆಗಲಿ ಎಂದು ಶಪಿಸುತ್ತಾಳೆ. ಇದಕ್ಕೆ ಪ್ರತಿಯಾಗಿ ಗಣಪತಿಯೂ ಕೂಡ ಶಾಪ ನೀಡುತ್ತಾನೆ. ನೀನು ರಾಕ್ಷಸನನ್ನು ಮದುವೆಯಾಗುವಂತೆ ಆಗಲಿ ಎಂದು ಹೇಳಿಬಿಡುತ್ತಾನೆ ಮತ್ತು ಆತನ ಪೂಜೆಯಲ್ಲಿ ಯಾವುದೇ ಕಾರಣಕ್ಕೂ ತುಳಸಿಗೆ ಅವಕಾಶವಿಲ್ಲ ಎಂದು ಹೇಳುತ್ತಾನೆ. ಆದ್ದರಿಂದ ತುಳಸಿಯನ್ನು ಗಣೇಶನ ಪೂಜೆಗೆ ಬಳಸುವಂತಿಲ್ಲ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ನಿಮ್ಮ ಭವಿಷ್ಯ: ಯಾವ ರಾಶಿಯ ಮೇಲೆ ಯಾವ ಪರಿಣಾಮ