Select Your Language

Notifications

webdunia
webdunia
webdunia
webdunia

ಧರ್ಮಸ್ಥಳ

ಧರ್ಮಸ್ಥಳ

ಇಳಯರಾಜ

ಕರ್ನಾಟಕದ ಪ್ರಮುಖ ಧಾರ್ಮಿಕ ಸ್ಥಳಗಳಲ್ಲಿ ಇದೂ ಕೂಡ ಒಂದು. ಮಂಗಳೂರು ಜಿಲ್ಲೆಯಲ್ಲಿರುವ ಧರ್ಮಸ್ಥಳ, ಅಲ್ಲಿಂದ ಪೂರ್ವಕ್ಕೆ 75 ಕಿ.ಮೀ. ದೂರದಲ್ಲಿದೆ.

ಸಹ್ಯಾದ್ರಿಯ ಮಡಿಲಲ್ಲಿರುವ ಧರ್ಮಸ್ಥಳದ ಮಂಜುನಾಥ ಸ್ವಾಮಿ ದೇವಾಲಯ ದರ್ಶನಕ್ಕೆ ಪ್ರತಿ ದಿನ ಸಾವಿರಾರು ಮಂದಿ ಇಲ್ಲಿಗೆ ಆಗಮಿಸುತ್ತಾರೆ. ಭಕ್ತಾಧಿಗಳು ನೇತ್ರಾವತಿ ನದಿಯಲ್ಲಿ ಪುಣ್ಯ ಸ್ನಾನ ಮಾಡಿ, ನಂತರ ದೇವರ ದರ್ಶನ ಪಡೆದು ಪವಾನವಾಗುತ್ತಾರೆ.

ಈ ಸ್ಥಳದ ವಿಶೇಷವೆಂದರೆ, ಇಲ್ಲಿರುವುದು ಶೈವ ದೇವಾಲಯ, ಈ ದೇವಾಲಯವನ್ನು ಪೂಜಿಸುವ ಅರ್ಚಕರು ಮಾಧ್ವ ವೈಷ್ಣವರು, ದೇವಸ್ಥಾನದ ಉಸ್ತುವಾರಿ ವಹಿಸಿರುವ ಧರ್ಮಾಧಿಕಾರಿಗಳು ಜೈನ ಧರ್ಮದ ಹೆಗ್ಗಡೆ ಕುಟುಂಬದವರು.

ಸ್ಥಳ ಪುರಾಣಗಳ ಪ್ರಕಾರ, ಅಮ್ಮುದೇವಿ ಬಳ್ಳಾಳ್ತಿ ಮತ್ತು ಬಿರ್ಮಣ ಪೆರ್ಗಡೆ ಎಂಬ ಜೈನ ದಂಪತಿಗಳು ಧರ್ಮದೇವತೆಗಳಿಗೆ ದೇವಾಲಯವನ್ನು ಕಟ್ಟಿಸಿದರು. 16ನೇ ಶತಮಾನದಲ್ಲಿ ಸೋದೆ ಮಠದ ವಾದಿರಾಜ ಸ್ವಾಮಿಗಳ ಲಿಂಗವನ್ನು ಮತ್ತೆ ಪ್ರತಿಷ್ಠಾಪಿಸಿದರು.
ಪ್ರತಿ ವರ್ಷ ನಡೆಯುವ ದೀಪೋತ್ಸವ ಬಹಳ ಪ್ರಸಿದ್ಧ. ತುಂಬಾ ಹಿಂದೆ ಇಲ್ಲಿ ಸಾಹಿತ್ಯ ಮತ್ತು ಧರ್ಮ ಸಮ್ಮೇಳನಗಳ ನಡೆಯುತ್ತಿದ್ದವು. 1973ರಲ್ಲಿ ಇಲ್ಲಿ ಏಕಶಿಲೆ ಗೊಮ್ಮಟನ ವಿಗ್ರಹವನ್ನು ಸ್ಥಾಪಿಸಲಾಯಿತು. ಈ ವಿಗ್ರಹ 11.9 ಮೀಟರ್ ಎತ್ತರ, 175 ಟನ್ ತೂಕವಿದೆ.

Share this Story:

Follow Webdunia kannada